ADVERTISEMENT

ದಾಬಸ್‌ಪೇಟೆ: ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:10 IST
Last Updated 17 ಅಕ್ಟೋಬರ್ 2018, 19:10 IST

ದಾಬಸ್‌ಪೇಟೆ: ಕೈಗಾರಿಕಾ ಪ್ರದೇಶ ಮತ್ತು ಅಂಗಡಿಗಳ ಮುಂದೆ ಹಾಕಿದ್ದ ಕಬ್ಬಿಣದ ಕಂಬಿಗಳನ್ನು ಕದಿಯುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ಗೌಸಿಯಾ ನಗರದ ಎಜು ಅಲಿಯಾಸ್‌ ಎಜಾಜ್ ಪಾಷಾ, ಚನ್ನಪಟ್ಟಣ ತಾಲ್ಲೂಕು ಹಾರೋಹಳ್ಳಿ ದೊಡ್ಡಿಯ ಮನು, ರಾಮನಗರದ ಐಜೂರಿನ ಮುನಿಸ್ವಾಮಿ, ಐಜೂರು ಗುಡ್ಡದ ರವಿ, ಲಕ್ಕೋಜನಹಳ್ಳಿ ಐಜೂರು ಗುಡ್ಡದ ಕುಮಾರ ಮತ್ತು ಅಂಜನಾಪುರದ ಬಸವರಾಜು ಬಂಧಿತರು.

ಆರೋಪಿಗಳ ವಿರುದ್ಧ ದಾಬಸ್‌ಪೇಟೆ ಮತ್ತು ತ್ಯಾಮಗೊಂಡ್ಲು ಠಾಣೆಯಲ್ಲಿ ತಲಾ 1, ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ 3 ಹಾಗೂ ಮಾದನಾಯಕನಹಳ್ಳಿ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

ADVERTISEMENT

ಬಂಧಿತರಿಂದ 19 ಟನ್ ಕಬ್ಬಿಣದ ಕಂಬಿ, ಕೃತ್ಯಕ್ಕೆ ಬಳಸಿದ ಒಂದು ಟಾಟಾ ಸುಮೋ ಮತ್ತು ಎರಡು ಕ್ಯಾಂಟರ್‌ ವಾಹನಗಳು ಸೇರಿದಂತೆ 11 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ದರೋಡೆಕೋರರ ಬಂಧನ

ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೆಂಗೇರಿ ಉಲ್ಲಾಳು ನಿವಾಸಿಗಳಾದ ರಾಜೇಶ್, ವಿಜಯ್, ವಿಲಿಯಂ ಮತ್ತು ತ್ರಿವೇಣಿ ಕುಮಾರ್‌ ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳು, ದರೋಡೆ ಮಾಡಿಕೊಂಡು ಹೋಗಿದ್ದ 18 ಸಾವಿರ ಬೆಲೆ ಬಾಳುವ ಎರಡು ಮೊಬೈಲ್ ಪೋನ್, 2 ಚಾಕುಗಳು ಮತ್ತು ಕಳವು ಮಾಡಿದ್ದ ಬೈಕನ್ನು ಅನ್ನು ವಶಪಡಿಸಿಕೊಳ್ಳಲಾಗಿದೆ.

ಇವರ ವಿರುದ್ಧ ಸಂಪಿಗೆಹಳ್ಳಿ ಮತ್ತು ದಾಬಸ್‌ಪೇಟೆ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.