
ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ ಗಾಯಕ ವಾಗೀಶ್ ಭಟ್ ಅವರಿಗೆ ಪಂ.ಆರ್.ವಿ. ಶೇಷಾದ್ರಿ ಗವಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ನಿ ಸ್ವರ್ಣಲತಾ ವಿ. ಭಟ್, ಅಶ್ವಿನ್ ಬಾಳಿಗಾ, ಸತೀಶ್ ಹಂಪಿಹೊಳಿ, ಎನ್. ಸಂತೋಷ್ ಹೆಗ್ಡೆ, ಪೂರ್ಣ ಆಚಾರ್ಯ, ರಂಜನಿ ಪ್ರಭು ಮತ್ತು ಶ್ರೀನಿವಾಸ ಪ್ರಭು ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ವಚನ ಹಾಗೂ ದಾಸ ಸಾಹಿತ್ಯ ಕರ್ನಾಟಕದ ಕೊಡುಗೆ. ಈಗಲೂ ಇವುಗಳನ್ನು ಜನರಿಗೆ ತಲುಪಿಸಲು ಕಲಾವಿದರು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಜೆಎಸ್ಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಾಸ ನಿರಂತರ ಸಂಗೀತೋತ್ಸವ ಹಾಗೂ ಪಂ.ಆರ್.ವಿ.ಶೇಷಾದ್ರಿ ಗವಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘12ನೇ ಶತಮಾನದಲ್ಲಿ ವಚನ ಸಾಹಿತ್ಯ ಪ್ರವರ್ಧಮಾನಕ್ಕೆ ಬಂದಿತು. 15ನೇ ಶತಮಾನದಲ್ಲಿ ದಾಸ ಸಾಹಿತ್ಯಕ್ಕೆ ಒತ್ತು ಸಿಕ್ಕಿತು. ಈ ಸಾಹಿತ್ಯದಲ್ಲಿನ ಉತ್ತಮ ವಿಚಾರಗಳು ಈಗಲೂ ಪ್ರಸ್ತುತವಾಗಿವೆ’ ಎಂದರು.
ಕಲಾವಿದ ಶ್ರೀನಿವಾಸಪ್ರಭು ಅವರು ಉತ್ಸವಕ್ಕೆ ಚಾಲನೆ ನೀಡಿ, ‘ಸಂಗೀತೋತ್ಸವವನ್ನು ಆಯೋಜಿಸುವುದು ಕಷ್ಟದ ಕೆಲಸ. ಎಲ್ಲ ಕಲಾವಿದರನ್ನು ಒಟ್ಟಿಗೆ ಸೇರಿಸಿ ಜನರನ್ನು ಸೆಳೆದು ಉದ್ದೇಶ ಈಡೇರುವಂತೆ ಮಾಡುವ ಇಂತಹ ಕೆಲಸಕ್ಕೆ ಸಮಾಜದ ಬೆಂಬಲವೂ ಸಿಗಲಿ’ ಎಂದು ಆಶಿಸಿದರು.
ಸಂಘಟಕ ಸತೀಶ್ ಹಂಪಿಹೊಳಿ, ಕವಯತ್ರಿ ರಂಜನಿ ಪ್ರಭು, ಕಥಕ್ ನೃತ್ಯಗಾರ್ತಿ ಪೂರ್ಣಾ ಆಚಾರ್ಯ, ಶೈಲೇಂದ್ರ ಶರ್ಮಾ, ಹಿಂದೂಸ್ತಾನಿ ಗಾಯಕ ಅಶ್ವಿನ್ ಬಾಳಿಗಾ ಹಾಜರಿದ್ದರು. ಕಲಾವಿದ ವಾಗೀಶ್ ಭಟ್ ಅವರು ಪಂ.ಆರ್.ವಿ. ಶೇಷಾದ್ರಿ ಗವಾಯಿ ಪ್ರಶಸ್ತಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.