
ಜಿ. ಅಶ್ವತ್ಥನಾರಾಯಣ ಏಕಬೋಟೆ ಹಾಗೂ ಕೆ.ರಾಜಣ್ಣ
ಬೆಂಗಳೂರು: ಮಹಾಲಕ್ಷ್ಮಿ ಬಡಾವಣೆ ನಿವಾಸಿ ಜಿ. ಅಶ್ವತ್ಥನಾರಾಯಣ ಏಕಬೋಟೆ (91) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ನೀರಾವರಿ ಇಲಾಖೆ ಕಾರ್ಯದರ್ಶಿಯಾಗಿ ನಿವೃತ್ತಿ ನಂತರವೂ ಬಿಡಿಎ ಸಲಹೆಗಾರರಾಗಿ, ಗಾಂಧಿನಗರದ ಅನಂತಸ್ವಾಮಿ ಆಶ್ರಮದ ಟ್ರಸ್ಟಿ ಹಾಗೂ ಸ್ವಕುಳಸಾಳಿ ಸಮಾಜದ ಸಂಘದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಕೆ.ರಾಜಣ್ಣ
ಬೆಂಗಳೂರು: ನಾಗರಭಾವಿ ಗ್ರಾಮದ ನಿವಾಸಿ ಕೆ.ರಾಜಣ್ಣ (79) ಅವರು ಶುಕ್ರವಾರ ನಿಧನರಾದರು. ಪತ್ನಿ ರಮಾದೇವಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಭಾನುವಾರ ನಾಗರಭಾವಿ ರುದ್ರಭೂಮಿ
ಯಲ್ಲಿ ನೆರವೇರಲಿದೆ. ಮಾಹಿತಿಗೆ 9880273313 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.