ADVERTISEMENT

ಮರಣದ ನೋಂದಣಿ ಜುಲೈನಲ್ಲಿ ಅಧಿಕ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 22:10 IST
Last Updated 8 ಆಗಸ್ಟ್ 2020, 22:10 IST

ಬೆಂಗಳೂರು: ಹಿಂದಿನ ತಿಂಗಳುಗಳಲ್ಲಿ ಮರಣ ಹೊಂದಿದವರ ನೋಂದಣಿಯಾಗಿರಲಿಲ್ಲ. ಹೀಗಾಗಿ, ಜುಲೈನಲ್ಲಿ ಮರಣದ ನೋಂದಣಿ ಪ್ರಮಾಣ ಅಧಿಕ ಸಂಖ್ಯೆಯಲ್ಲಿ ಆಗಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

‘ಜುಲೈನಲ್ಲಿ ಸಾವಿನ ಪ್ರಮಾಣ ಏರಿಕೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಗೆ ಸ್ಪಷ್ಟನೆ ನೀಡಿರುವ ಅವರು, ‘ಲಾಕಡ್ ಡೌನ್‌, ಜನತಾ ಕರ್ಫ್ಯೂ ಇದ್ದಿದ್ದರಿಂದ ಹಾಗೂ ಸಾರಿಗೆ ಸೌಲಭ್ಯ ಇಲ್ಲದೇ ಏಪ್ರಿಲ್‌, ಮೇ ತಿಂಗಳುಗಳಲ್ಲಿ ಮೃತಪಟ್ಟವರ ನೋಂದಣಿ ನಡೆದಿರಲಿಲ್ಲ. ಜುಲೈನಲ್ಲಿ ನೋಂದಣಿ ನಡೆದಿರುವುದರಿಂದ ಸಂಖ್ಯಾತ್ಮಕವಾಗಿ ಹೆಚ್ಚಳ ಕಂಡಿದೆ’ ಎಂದರು.

‘2019ರ ಜನವರಿ–ಜುಲೈ ಅವಧಿಯಲ್ಲಿ ಬೆಂಗಳೂರಿನಲ್ಲಿ 37,004 ಮರಣ ಸಂಭವಿಸಿದ್ದರೆ, 2020ರ ಇದೇ ಅವಧಿಯಲ್ಲಿ 35,307 ಮರಣ ಪ್ರಕರಣಗಳು ನೋಂದಣಿಯಾಗಿವೆ.ಸಂಖ್ಯೆಯಲ್ಲಿ 1,697ರಷ್ಟು ಕಡಿಮೆಯಾಗಿದೆ. 2019ರ ಜುಲೈನಲ್ಲಿ 5,278 ಮರಣ ಪ್ರಕರಣಗಳು ವರದಿ ಯಾಗಿದ್ದರೆ, 2020ರಲ್ಲಿ 6,477ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.