ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಏರಿಕೆ ಮಾಡಿದ್ದ ಶುಲ್ಕವನ್ನು ₹232 ರಿಂದ ₹120ಕ್ಕೆ ಇಳಿಕೆ ಮಾಡಲಾಗಿದೆ.
ಶುಲ್ಕ ಹೆಚ್ಚಳದ ವಿರುದ್ಧ ಸಾರ್ಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಪಾರ್ಕಿಂಗ್ ಶುಲ್ಕ ದಿನಕ್ಕೆ ₹80 ಇತ್ತು. ಅದನ್ನು ಏಕಾಏಕಿ ₹232ಕ್ಕೆ ಹೆಚ್ಚಿಸಲಾಗಿತ್ತು. 2 ಗಂಟೆವರೆಗೆ ₹12 ಮತ್ತು ನಂತರದ 16 ಗಂಟೆವರೆಗೆ ಪ್ರತಿ ಗಂಟೆಗೆ ₹10 ಶುಲ್ಕ ಇತ್ತು. ಅದನ್ನು ₹15ಕ್ಕೆ ಹೆಚ್ಚಿಸಲಾಗಿತ್ತು. ಈಗ 2 ಗಂಟೆ ಬಳಿಕ 24 ಗಂಟೆವರೆಗೆ ಪ್ರತಿ ಎರಡು ಗಂಟೆಗೆ ₹10 ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.