ADVERTISEMENT

ಜಿಂಕೆ ಕೊಂಬು ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:19 IST
Last Updated 21 ಫೆಬ್ರುವರಿ 2024, 15:19 IST
ಬಂಧಿತ ಆರೋಪಿ.
ಬಂಧಿತ ಆರೋಪಿ.   

ಬೆಂಗಳೂರು: ಜಿಂಕೆಯ ಕೊಂಬುಗಳ ಮಾರಾಟಕ್ಕೆ ಯತ್ನಿಸಿದ್ದ ಆಂಧ್ರಪ್ರದೇಶದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಿಜಯವಾಡದ ಶೇಕ್‌ರೆಹಮತ್‌ ಉಲ್ಲಾ (54) ಮತ್ತು ರಾಜಮಂಡ್ರಿಯ ಫಣಿಂದ್ರ ಚಾರಿ (44) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಜಿಂಕೆಯ ತಲೆಬುರುಡೆ ಸಹಿತವಿರುವ ಆರು ಜಿಂಕೆಯ ಕೊಂಬುಗಳು ಮತ್ತು ತಲೆಬುರುಡೆ ರಹಿತವಿರುವ 33 ಜಿಂಕೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಆಂಧ್ರಪ್ರದೇಶದ ಗುಂಟೂರು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಂದ ಜಿಂಕೆ ಕೊಂಬುಗಳನ್ನು ತಂದಿದ್ದ ಇಬ್ಬರು ಆರೋಪಿಗಳು, ಕಾಡುಗೋಡಿಯ ಬಸ್ ನಿಲ್ದಾಣದ ಬಳಿ ಮಾರಾಟಕ್ಕೆ ಮುಂದಾಗಿದ್ದರು. ಆಂಧ್ರಪ್ರದೇಶದಿಂದ ಬಸ್‌ನಲ್ಲಿ ಜಿಂಕೆ ಕೊಂಬುಗಳನ್ನು ನಗರಕ್ಕೆ ತರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಜಿಂಕೆ ಕೊಂಬುಗಳ ಖರೀದಿ ಹಾಗೂ ಆರೋಪಿಗಳಿಗೆ ಮಾರಾಟ ಮಾಡಿದ್ದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಜಿಂಕೆ ಕೊಂಬು ಮಾರಾಟ ಮಾಡಿರುವ ಶಂಕೆಯಿದ್ದು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬಂಧಿತ ಆರೋಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.