ADVERTISEMENT

ಡೆಂಗಿ: 44 ದಿನಗಳಲ್ಲಿ 575 ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 15:41 IST
Last Updated 14 ಫೆಬ್ರುವರಿ 2024, 15:41 IST
ಡೆಂಗಿ ಪ್ರಕರಣ
ಡೆಂಗಿ ಪ್ರಕರಣ   

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಆರಂಭದಲ್ಲಿಯೇ ಅಧಿಕ ಡೆಂಗಿ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕಳೆದ 44 ದಿನಗಳಲ್ಲಿ 575 ಪ್ರಕರಣಗಳು ದೃಢಪಟ್ಟಿವೆ. 

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2023ರಲ್ಲಿ 16,500ಕ್ಕೂ ಅಧಿಕ ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. 9 ಮಂದಿ ಮೃತಪಟ್ಟಿದ್ದರು. ಈ ವರ್ಷದ ಆರಂಭದಲ್ಲಿಯೂ ಜ್ವರಕ್ಕೆ ಒಳಗಾದ ಹಲವರಿಗೆ ಡೆಂಗಿ ಶಂಕೆಗೆ ಕಾರಣ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 11,389 ಶಂಕಿತರನ್ನು ಗುರುತಿಸಲಾಗಿದ್ದು, 6,010 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. 

ರಾಜ್ಯದ 28 ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಚಿತ್ರದುರ್ಗ (79), ಮಂಡ್ಯ (54), ಶಿವಮೊಗ್ಗ (46), ತುಮಕೂರು (42), ಕೊ‍ಪ್ಪಳ (41) ಹಾಸನ (34), ದಕ್ಷಿಣ ಕನ್ನಡ (34), ವಿಜಯಪುರ (34) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ. ಯಾವುದೇ ಡೆಂಗಿ ಮರಣ ಪ್ರಕರಣ ದೃಢಪಟ್ಟಿಲ್ಲ. 

ADVERTISEMENT

ಈ ವರ್ಷ ಚಿಕೂನ್‌ಗುನ್ಯ ಜ್ವರದ ಶಂಕೆ ಕಾರಣ 2,151 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, 161 ಪ್ರಕರಣಗಳು ದೃಢಪಟ್ಟಿವೆ. 18 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗದಲ್ಲಿ (35) ಗರಿಷ್ಠ ಪ್ರಕರಣಗಳು ಖಚಿತಪಟ್ಟಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.