ADVERTISEMENT

ಡೆಂಗೆ ಜ್ವರ: ಐದು ದಿನಗಳಲ್ಲಿ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:32 IST
Last Updated 22 ನವೆಂಬರ್ 2018, 19:32 IST

ಬೆಂಗಳೂರು: ರಾಜ್ಯದಲ್ಲಿ ಡೆಂಗೆ ಹಾಗೂ ಚಿಕೂನ್‌ಗುನ್ಯಾ ಹರಡುವಿಕೆ ಹೆಚ್ಚಾಗಿದ್ದು, ಡೆಂಗೆ ಜ್ವರದಿಂದ ಇದೇ 16ರಿಂದ 20ರ ಅವಧಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

22 ದಿನಗಳಲ್ಲಿ 120 ಡೆಂಗೆ ಪ್ರಕರಣಗಳು ವರದಿಯಾಗಿವೆ. 100 ಹೊಸ ಪ್ರಕರಣ ಸೇರ್ಪಡೆಯಾಗುವುದರೊಂದಿಗೆ ಚಿಕೂನ್‌ಗುನ್ಯಾ ತೀವ್ರಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಬಿಬಿಎಂಪಿಯಲ್ಲಿ 698, ದಕ್ಷಿಣ ಕನ್ನಡ 540, ಹಾಸನ 243, ದಾವಣಗೆರೆ 222, ಉಡುಪಿ 215, ಕಲಬುರ್ಗಿ 212 ಸೇರಿದಂತೆ ರಾಜ್ಯದಲ್ಲಿ 2,712 ಮಂದಿಯಲ್ಲಿ ಡೆಂಗೆ ಕಾಣಿಸಿಕೊಂಡಿದೆ.

ADVERTISEMENT

ತುಮಕೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ನಾಲ್ವರು ಮೃತಪಟ್ಟಿದ್ದಾರೆ. 2,049 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಹವಾಮಾನ ಏರುಪೇರಿನಿಂದಾಗಿಯೂ ನಾನಾ ಬಗೆಯ ವೈರಾಣು ಜ್ವರ ಜನರನ್ನು ಬಾಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.