
ರಾಜ ರಾಜೇಶ್ವರಿ ನಗರ: ಸರ್ವರು ಒಗ್ಗೂಡಿ ಭಕ್ತಿಯಿಂದ, ಶಿವರಾತ್ರಿ ಉತ್ಸವ ಆಚರಣೆ ಮಾಡಿದರೆ, ಸಂಸ್ಕತಿ, ಧಾರ್ಮಿಕ ಪರಂಪರೆ ಉಳಿಸಲು ಸಹಕಾರಿಯಾಗಿ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಸಂಭ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಸಿ.ಎನ್. ಅಶ್ವಥ ನಾರಾಯಣ್ ಮಾತನಾಡಿ, ‘ಎಲ್ಲರೂ ಪ್ರೀತಿ, ವಿಶ್ವಾಸ, ನಂಬಿಕೆಯಿಂದ, ಸಹೋದರ ಸಹೋದರಿಯಂತೆ ದೇವರ ಆರಾಧನೆ ಮಾಡುವ ಮೂಲಕ ನೆಮ್ಮದಿ, ಆರೋಗ್ಯಯುತ ಜೀವನ ಸಾಗಿಸೋಣ’ ಎಂದರು.
ಶಾಸಕ ಮುನಿರತ್ನ ಮಾತನಾಡಿ, ‘ಎಲ್ಲಿ ಧರ್ಮವಿರುತ್ತದೆಯೊ ಅಲ್ಲಿ ಶಾಂತಿ ಕಾಣಬಹುದು. ಸರ್ವಜನರು ಒಗ್ಗೂಡಿ ಶಿವಸ್ಮರಣೆ ಮಾಡಿದರೆ ನೆಮ್ಮದಿ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಮುಖಂಡರಾದ ಮಲ್ಲತ್ತಹಳ್ಳಿ ಎಂ. ಮಂಜುನಾಥ, ಶಿವಶಂಕರ್, ರವಿಗೌಡ, ಜಯರಾಮಯ್ಯ, ಯೋಗೇಶ್, ಜಿ. ಶ್ರೀನಿವಾಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.