
ಪ್ರಜಾವಾಣಿ ವಾರ್ತೆ
ಬೆಂಗಳೂರು: ಹೊಸ ವರ್ಷದ ಪ್ರಯುಕ್ತ ಎಚ್‌ಬಿಆರ್ ಲೇಔಟ್‌ನ ಇಸ್ಕಾನ್‌ನಲ್ಲಿ ಎರಡು ದಿನ ವಿವಿಧ ಕಾರ್ಯಕ್ರಮಗಳು ನಡೆದವು.
ಡಿ. 31 ಮತ್ತು ಜ.1ರಂದು ಭಕ್ತಿಗೀತೆಗಳು ಮತ್ತು ಭಜನಾ ಕಾರ್ಯಕ್ರಮ ನೆರವೇರಿತು. ಯುವಜನರು ಹಾಗೂ ಹಿರಿಯರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.
‘ಭಕ್ತಿ ಬಾಷ್’ ಕಾರ್ಯಕ್ರಮ ಭಕ್ತರಲ್ಲಿ ಸಂತಸದ ವಾತಾವರಣ ಸೃಷ್ಟಿಸಿತು. ರಷ್ಯಾ ತಂಡದ ಸಂಗೀತ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಅಭಿಮಾನಿಗಳು ಸಂಭ್ರಮಿಸಿದರು. ಭಕ್ತಿಗೀತೆಗಳಿಗೆ ನೆರದಿದ್ದ ಸಾವಿರಾರು ಭಕ್ತರು ತಲೆದೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.