ADVERTISEMENT

ಧರಾಮೃತ ಗೊಬ್ಬರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 19:55 IST
Last Updated 30 ಡಿಸೆಂಬರ್ 2025, 19:55 IST
<div class="paragraphs"><p> ಗೊಬ್ಬರ?</p></div>

ಗೊಬ್ಬರ?

   

ಬೆಂಗಳೂರು: ಇಂಡಿಯನ್‌ ಫಾರ್ಮರ್ಸ್‌ ಫರ್ಟಿಲೈಸರ್‌ ಕೋ–ಆಪರೇಟಿವ್‌ ಲಿಮಿಟೆಡ್‌ (ಐಎಫ್‌ಎಫ್‌ಸಿಒ) ನಗರದ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಆಯೋಜಿಸಿದ್ದ ಮೆಗಾ ಕೋ–ಆಪರೇಟಿವ್‌ ಆ್ಯಂಡ್‌ ಫಾರ್ಮರ್ಸ್‌ ಕಾನ್ಫರೆನ್ಸ್‌ನಲ್ಲಿ ಧರಾಮೃತ ಗೊಬ್ಬರ ಬಿಡುಗಡೆಗೊಳಿಸಲಾಯಿತು. 

ಐಎಫ್‌ಎಫ್‌ಸಿಒ ಅಧ್ಯಕ್ಷ ದಿಲೀಪ್ ಸಂಗಾಣಿ ಮಾತನಾಡಿ, ‘ಕಳೆದ ಹಲವು ದಶಕಗಳಿಂದ ಸಹಕಾರಿಗಳು ಭಾರತದ ಕೃಷಿ ಬೆಳವಣಿಗೆಯ ಆತ್ಮವಾಗಿದ್ದಾರೆ. ರೈತ ಕೇಂದ್ರಿತ ಆವಿಷ್ಕಾರಗಳನ್ನು ನಿರಂತರವಾಗಿ ಪರಿಚಯಿಸುವುದು ಮತ್ತು ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವುದರ ಮೂಲಕ ನಾವು ಉತ್ಪಾದಕತೆಯನ್ನು ಹೆಚ್ಚಿಸಬೇಕು. ಇದರ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಬೇಕು’ ಎಂದು ಹೇಳಿದರು. 

ADVERTISEMENT

ಐಎಫ್‌ಎಫ್‌ಸಿಒ ವ್ಯವಸ್ಥಾಪಕ ನಿರ್ದೇಶಕ ಕೆ. ಜೆ. ಪಟೇಲ್ ಮಾತನಾಡಿ, ‘ಧರಾಮೃತವು ಅಮಿನೊ ಹಾಗೂ ಅಲ್ಜಿನಿಕ್ ಆಮ್ಲಗಳಿಂದ ಸಮೃದ್ಧವಾಗಿದೆ. ಇದು ಬೆಳೆಯ ಶಕ್ತಿಯನ್ನು ವೃದ್ಧಿಸುವ ಜೊತೆಗೆ ಕೃಷಿ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಸಹಕಾರಿ ಆಗಿದೆ. ನ್ಯಾನೊ ರಸಗೊಬ್ಬರಗಳನ್ನು ಧರಾಮೃತದಂತಹ ಸಸ್ಯ ಸಾರಗಳೊಂದಿಗೆ ಸಂಯೋಜಿಸಿದಾಗ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ಜೊತೆಗೆ ಮಣ್ಣಿನ ಆರೋಗ್ಯವನ್ನು ಸುಧಾರಿಸಬಹುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.