ADVERTISEMENT

ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್‌ ಇ–ಸ್ಟ್ಯಾಂಪ್‌ ತರಬೇತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 20:54 IST
Last Updated 8 ಜನವರಿ 2026, 20:54 IST
<div class="paragraphs"><p>ಸ್ಟ್ಯಾಂಪ್‌</p></div>

ಸ್ಟ್ಯಾಂಪ್‌

   

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಜಾರಿಗೊಳಿಸಿರುವ ಡಿಜಿಟಲ್‌ ಇ ಸ್ಟ್ಯಾಂಪ್‌ ಕುರಿತ ತರಬೇತಿಯನ್ನು ಶಿವಾಜಿನಗರ ನೋಂದಣಿ ಜಿಲ್ಲಾ ವ್ಯಾಪ್ತಿಯ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಜ.9 ರಂದು ಬೆಳಿಗ್ಗೆ 11.30 ರಿಂದ ಶಿವಾಜಿನಗರ ಹಾಗೂ ಮಧ್ಯಾಹ್ನ 3ರಿಂದ ಹಲಸೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ. ಜ.12ರಂದು ಬೆಳಿಗ್ಗೆ 11.30 ರಿಂದ ಕೆ.ಆರ್.ಪುರ, ಮಧ್ಯಾಹ್ನ 3ರಿಂದ ವರ್ತೂರು ಉಪ ನೋಂದಣಾಧಿಕಾರಿ ಕಚೇರಿ, ಜ. 13ರಂದು ಬೆಳಿಗ್ಗೆ 11.30ರಿಂದ ಮಹದೇವಪುರ, ಮಧ್ಯಾಹ್ನ 3 ರಿಂದ ಬಿದರಹಳ್ಳಿ ಉಪ ನೋಂದಣಾಧಿಕಾರಿ ಕಚೇರಿ, ಜ.14ರಂದು ಬೆಳಿಗ್ಗೆ 11.30ರಿಂದ ಇಂದಿರಾನಗರ ಹಾಗೂ ಮಧ್ಯಾಹ್ನ 3ರಿಂದ ಬಾಣಸವಾಡಿ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ.

ADVERTISEMENT

ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಹಾಗೂ ಎಸ್‌ಎಚ್‌ಐಎಲ್‌ಎಲ್‌ ಮೂಲಕ ಇ–ಸ್ಟ್ಯಾಂಪ್‌ ವಿತರಿಸುವ ಸಹಕಾರಿ ಸೌಹಾರ್ದ ಸಂಘಗಳ ಸಿಬ್ಬಂದಿ ಮತ್ತು ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.