ADVERTISEMENT

ಡಿಕೆಶಿ ರೋಡ್‌ ಶೋ; ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 20:31 IST
Last Updated 26 ಅಕ್ಟೋಬರ್ 2019, 20:31 IST
ಹೆಬ್ಬಾಳ ಬಳಿ ಉಂಟಾಗಿದ್ದ ವಾಹನಗಳ ದಟ್ಟಣೆ
ಹೆಬ್ಬಾಳ ಬಳಿ ಉಂಟಾಗಿದ್ದ ವಾಹನಗಳ ದಟ್ಟಣೆ   

ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ರಸ್ತೆಯಲ್ಲಿ ಶನಿವಾರ ರೋಡ್ ಶೋ ನಡೆಸಿದ್ದ ಸಂದರ್ಭದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಯಿತು. ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ ದಟ್ಟಣೆಯಲ್ಲಿ ಸಿಲುಕಿಕೊಂಡಿತ್ತು.

ದೆಹಲಿಯಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ಸ್ವಾಗತಿಸಲು ರಸ್ತೆಯುದ್ದಕ್ಕೂ ಕಾರ್ಯಕರ್ತರು ಸೇರಿದ್ದರು. ಎಸ್ಟಿಮ್ ಮಾಲ್‌ಯಿಂದ ಮೇಖ್ರಿ ವೃತ್ತದವರೆಗೂ ವಾಹನಗಳ ದಟ್ಟಣೆ ಕಂಡುಬಂತು. ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು. ಅದೇ ದಟ್ಟಣೆಯಲ್ಲೇ ಆಂಬುಲೆನ್ಸ್‌ ಸಿಕ್ಕಿಕೊಂಡು, 15 ನಿಮಿಷ ಕಾಯಬೇಕಾಯಿತು. ಆಂಬುಲೆನ್ಸ್ಮುಂದಕ್ಕೆ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು.

ರಸ್ತೆಯಲ್ಲೇ ರೋಡ್‌ ಶೋ ಮಾಡಿ ದಟ್ಟಣೆಗೆ ಕಾರಣರಾದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸವಾರರು, ರೋಡ್‌ ಶೋ ನಡೆಸಲು ಅನುಮತಿ ನೀಡಿದ ಪೊಲೀಸರ ವಿರುದ್ಧವೂ ಅಸಮಾಧಾನ ಹೊರಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.