ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕಿರುತೆರೆ ನಟ ಸನ್ನಿ ಮಹಿಪಾಲ್ ಅವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬುಧವಾರ ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
‘ಆರೋಪಿಗೆ ನೋಟಿಸ್ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸನ್ನಿ ಮಹಿಪಾಲ್ ಮತ್ತು ಯುವತಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಮನೆಯವರಿಗೆ ಮದುವೆ ವಿಷಯ ತಿಳಿಸಸುವವರೆಗೂ ಬೇರೆ ಬೇರೆ ಮನೆಗಳಲ್ಲಿ ಇರಲು ಇಬ್ಬರೂ ನಿರ್ಧರಿಸಿದ್ದರು. ಈ ನಡುವೆ ಮಹಿಪಾಲ್ ಬೇರೊಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ವಿಷಯ ತಿಳಿದು, ಪತ್ನಿ ವಿಜ್ಞಾನನಗರದ ಪತಿಯ ಮನೆಗೆ ಬಂದಿದ್ದರು. ಆಗ ಪತ್ನಿ ಮೇಲೆ ಸನ್ನಿ ಮಹಿಪಾಲ್ ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.