ರಾಜರಾಜೇಶ್ವರಿನಗರ: ರಾಮೋಹಳ್ಳಿ ಮತ್ತು ವಿನಾಯಕನಗರದಲ್ಲಿ ₹14 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು.
ಇದೇ ವೇಳೆ, ₹46 ಲಕ್ಷ ವೆಚ್ಚದ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನ ಕಟ್ಟಡ ಲೋಕಾರ್ಪಣೆ ಮಾಡಿದ ಶಾಸಕರು, 94 ಸಿ.ಸಿ.ಯೋಜನೆಯಲ್ಲಿ ನೀಡಲಾದ ಹಕ್ಕು ಪತ್ರಗಳಿಗೆ ಇ–ಖಾತಾಗಳನ್ನು ವಿತರಿಸಿದರು.
ಇದೇ ವೇಳೆ ರಾಮೋಹಳ್ಳಿಯಲ್ಲಿ ನಡೆದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸವಲತ್ತು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಆಗ ಮಾತ್ರ ಗ್ರಾಮಸಭೆಗಳಿಗೆ ಅರ್ಥ ಬರುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ರೈತ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ವಿ.ವೇಣುಗೋಪಾಲ್ 33 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಮಾತನಾಡಿ, ’ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ವಸತಿ, ನಿವೇಶನ ರಹಿತರಿಗೆ 30 ಎಕರೆ ಪ್ರದೇಶದಲ್ಲಿ ನಿವೇಶನ ನೀಡಲು ಶಾಸಕರು ಮುಂದಾಗಿದ್ದಾರೆ’ ಎಂದರು.
ಬಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಡಿ.ಹನುಮಂತಯ್ಯ, ಗ್ರಾ.ಪಂ.ಉಪಾಧ್ಯಕ್ಷೆ ಗೌರಮ್ಮ ಕೃಷ್ಣಪ್ಪ, ಬ್ಯಾಂಕ್ ಉಪಾಧ್ಯಕ್ಷೆ ಶೋಭಾ ತಿಮ್ಮೇಗೌಡ, ನಿರ್ದೇಶಕ ಚೌಡರೆಡ್ಡಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಆರ್.ಚಂದ್ರಪ್ಪ, ಬಿ.ಎಚ್.ಪ್ರಭು, ರವಿಕುಮಾರ್, ವಿಜಯಲಕ್ಷ್ಮಿ, ಹನುಮಂತಯ್ಯ, ಸುಶೀಲನಾಗರಾಜು, ಮುಖಂಡರಾದ ಚೇತನ್‍ಗೌಡ, ಆಂಜನೇಯಗೌಡ, ಯಲ್ಲಪ್ಪ, ರಾಕೇಶ್, ಮಾಜಿ ಅಧ್ಯಕ್ಷ ಟಿ.ವೆಂಕಟೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.