ADVERTISEMENT

ಬಾಲಭವನದಲ್ಲಿ ಚಿಣ್ಣರ ಬಣ್ಣ

ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಷನ್‌ ವತಿಯಿಂದ ಚಿತ್ರಕಲಾ ಸ್ವರ್ಧೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 20:18 IST
Last Updated 20 ಸೆಪ್ಟೆಂಬರ್ 2018, 20:18 IST
ಚಿತ್ರಕಲಾ ಸ್ಪರ್ಧೆಯ ವಿಜೇತರು (ನಿಂತವರು ಎಡದಿಂದ ಹಿರಿಯರ ವಿಭಾಗ) ಕುಸುಮಿತಾ ಎ. ಅನುರಾಗ್‌ ಜಂಗ್ರಾ, ಲವ್ಲಿ ಮ್ಯಾನ್ಷಿಯನ್‌, (ಕುಳಿತವರು ಎಡದಿಂದ, ಕಿರಿಯರ ವಿಭಾಗ) ಕಿರಣ್‌ ಜಿ., ಎ. ಅಮೂಲ್ಯಾ ತೇಜಸಿಂಗ್‌, ರೋಹಿಣಿ ಎಚ್‌.ಜಿ., ಕೇಶವ್‌ ಸಾಯಿ, ವರ್ಷಿತ್‌ ಎಂ. ಗೌಡ, ಸ್ಪರ್ಧೆಯ ನಿರ್ವಾಹಕಿ ರೇಖಾ ಕೃಷ್ಣಮೂರ್ತಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಚಿತ್ರಕಲಾ ಸ್ಪರ್ಧೆಯ ವಿಜೇತರು (ನಿಂತವರು ಎಡದಿಂದ ಹಿರಿಯರ ವಿಭಾಗ) ಕುಸುಮಿತಾ ಎ. ಅನುರಾಗ್‌ ಜಂಗ್ರಾ, ಲವ್ಲಿ ಮ್ಯಾನ್ಷಿಯನ್‌, (ಕುಳಿತವರು ಎಡದಿಂದ, ಕಿರಿಯರ ವಿಭಾಗ) ಕಿರಣ್‌ ಜಿ., ಎ. ಅಮೂಲ್ಯಾ ತೇಜಸಿಂಗ್‌, ರೋಹಿಣಿ ಎಚ್‌.ಜಿ., ಕೇಶವ್‌ ಸಾಯಿ, ವರ್ಷಿತ್‌ ಎಂ. ಗೌಡ, ಸ್ಪರ್ಧೆಯ ನಿರ್ವಾಹಕಿ ರೇಖಾ ಕೃಷ್ಣಮೂರ್ತಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:ಮಕ್ಕಳು ಕ್ಯಾನ್ವಾಸ್‌ ಮೇಲೆ ಬಣ್ಣದ ಕನಸುಗಳನ್ನು ಕುಂಚಗಳಲ್ಲಿ ಹರಡಿದರು. ಅವರ ಶೈಕ್ಷಣಿಕ ಹಿನ್ನೆಲೆ, ಆಲೋಚನಾ ಸಾಮರ್ಥ್ಯ, ಸೃಜನಶೀಲತೆಗೆ ತಕ್ಕಂತೆ ಅವರು ಚಿತ್ರಗಳನ್ನು ಬಿಡಿಸಲು ಅವಕಾಶ ನೀಡಲಾಗಿತ್ತು.

ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಷನ್‌ ವತಿಯಿಂದ ಕಬ್ಬನ್‌ ಪಾರ್ಕ್‌ನಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.4ರಿಂದ 7 (ಕಿರಿಯರ ವಿಭಾಗ) ಮತ್ತು 8ರಿಂದ 10ನೇ ತರಗತಿ (ಹಿರಿಯರ ವಿಭಾಗ) ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿತ್ತು.

ಕಿರಿಯರಿಗೆ ಕೊಟ್ಟ ವಿಷಯ ನನ್ನ ಕನಸು, ಮೃಗಾಲಯಕ್ಕೆ ಭೇಟಿ, ಪರಿಸರ ರಕ್ಷಣೆ. ಹಿರಿಯರಿಗೆ ಜಾಗತಿಕ ತಾಪಮಾನ, ನನ್ನ ಭವಿಷ್ಯದ ನಗರ ಮತ್ತು ವನ್ಯಜೀವಿಗಳು. ಈ ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಪ್ರತಿ ವಿದ್ಯಾರ್ಥಿಗಳು ತಮ್ಮದೇ ಆದ ಕಲ್ಪನೆಯನ್ನು ಕುಂಚದಲ್ಲಿ ಅರಳಿಸಿದರು ಎಂದು ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್ಸ್‌ನ ಸಹಾಯಕ ಕ್ಯುರೇಟರ್‌ ರೇಖಾ ಕೃಷ್ಣಮೂರ್ತಿ ಹೇಳಿದರು.

ADVERTISEMENT

‘ಸ್ಪರ್ಧೆಯಲ್ಲಿ ಸೋಲು– ಗೆಲುವಿಗಿಂತಲೂ ಭಾಗವಹಿಸುವುದು ಮುಖ್ಯ ಎಂದು ವಿದ್ಯಾರ್ಥಿ ಕಿರಣ್‌ ಹೇಳಿದರು. ಕಳೆದ ಎರಡು ವರ್ಷಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ರೋಹಿಣಿಗೆ ಈ ಬಾರಿ ಬಹುಮಾನ ಬಂದಿತ್ತು. ಇದು ಆಶ್ಚರ್ಯ ಮತ್ತು ಖುಷಿ ತಂದಿದೆ' ಎಂದು ರೋಹಿಣಿ ಹೇಳಿದರು.

ಗೆದ್ದವರು, ಹಿರಿಯರ ವಿಭಾಗ: ಕುಸುಮಿತಾ ಎ. ವಿಡಿಯಾ ಪೂರ್ಣಪ್ರಜ್ಞ ಶಾಲೆ (ಪ್ರಥಮ), ಅನುರಾಗ್‌ ಜಾಂಗ್ರಾ, ಆರ್ಮಿ ಪಬ್ಲಿಕ್‌ ಸ್ಕೂಲ್‌ (ದ್ವಿತೀಯ), ಲೇಖನಾ ಎಸ್‌.ಎಸ್‌.ವಿಡಿಯಾ ಪೂರ್ಣಪ್ರಜ್ಞ ಶಾಲೆ (ತೃತೀಯ), ಲವ್ಲಿ ಮ್ಯಾನ್ಸಿಯಾನ್‌, ರೇಯನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಮತ್ತು ಅರ್ಜುನ್‌ ನಾಗರಾಜ್‌ ಸೈಂಟ್‌ ಜಾನ್ಸ್‌ ಹೈಸ್ಕೂಲ್‌ (ಸಮಾಧಾನಕರ ಬಹುಮಾನ)

ಕಿರಿಯರ ವಿಭಾಗ: ಕಿರಣ್‌ ಜಿ. ಸೈಂಟ್‌ ಜಾನ್ಸ್‌ ಹೈಸ್ಕೂಲ್‌ (ಪ್ರಥಮ), ಎ. ಅಮೂಲ್ಯಾ ತೇಜ ಸಿಂಗ್‌, ಕಾರ್ಮೆಲ್‌ ಸ್ಕೂಲ್‌ (ದ್ವಿತೀಯ), ರೋಹಿಣಿ ಎಚ್‌.ಜಿ. ಆಕ್ಸ್‌ಫರ್ಡ್‌ ಇಂಗ್ಲಿಷ್‌ ಶಾಲೆ (ತೃತೀಯ), ವರ್ಷಿತಾ ಎಂ. ಗೌಡ ಮಾರ್ಟಿನ್‌ ಲೂಥರ್‌ ಸ್ಕೂಲ್‌ ಮತ್ತು ಕೇಶವ್‌ ಸಾಯಿ, ಸೈಂಟ್‌ ಫಿಲೋಮಿನಾ ಪಬ್ಲಿಕ್‌ ಸ್ಕೂಲ್‌ ದೊಡ್ಡ ಬೈಲಕೆರೆ (ಸಮಾಧಾನಕರ ಬಹುಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.