ಬೆಂಗಳೂರು: ಭಾರತದ ಮೊದಲ ಕೆ-12 ಸ್ಕೂಲ್ ಆಫ್ ಇನ್ನೋವೇಶನ್ ಆಗಿರುವ ಏಕ್ಯ ನವ ಶಾಲೆಯ ‘ಫೈಂಡ್’ ಫೆಸ್ಟಿವಲ್ ಭಾನುವಾರ ಆರಂಭವಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ‘ಗುಣಮಟ್ಟದ ಶಿಕ್ಷಣವು ಮುಖ್ಯವಾಗಿದೆ. ಶಿಕ್ಷಣಮಟ್ಟ ಸುಧಾರಿಸಲು ಶಿಕ್ಷಣ ತಜ್ಞರು ಮತ್ತು ಸಂಸ್ಥೆಗಳಿಗೆ ನಾವೀನ್ಯದ ಸ್ವಾತಂತ್ರ್ಯವನ್ನು ನೀಡಬೇಕು’ ಎಂದು ತಿಳಿಸಿದರು.
ಟಿಐಎಸ್‌ಬಿ ಮತ್ತು ನ್ಯಾಷನಲ್ ಪಬ್ಲಿಕ್ ಸ್ಕೂಲ್‌ಗಳ ಸಂಸ್ಥಾಪಕ ಕೆ.ಪಿ. ಗೋಪಾಲಕೃಷ್ಣ ಮಾತನಾಡಿ, ‘ಶಿಕ್ಷಣದಲ್ಲಿ ಸಮಗ್ರ ಕಲಿಕೆ ಪ್ರಮುಖ ಸ್ಥಾನ ಪಡೆದಿದೆ. ಇದು ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಒತ್ತು ನೀಡುತ್ತದೆ. ಈ ಕ್ಷೇತ್ರದಲ್ಲಿ ಪ್ರಯೋಗ ಮತ್ತು ಸಂಶೋಧನೆಗೆ ಸಾಕಷ್ಡು ಅವಕಾಶವಿದೆ, ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲ ಚಿಂತನೆಗೆ ಸಹಾಯ ಮಾಡುತ್ತದೆ’ ಎಂದರು.
ಡಿಸೈನ್ ಥಿಂಕಿಂಗ್ ಚಾಲೆಂಜ್, ಕಲಿಕೆಯ ಪ್ರದರ್ಶನ, ಸಂವಾದಾತ್ಮಕ ಕಾರ್ಯಾಗಾರಗಳು, ಪ್ಯಾನಲ್ ಚರ್ಚೆಗಳು, ಮ್ಯೂಸಿಯಂ ಅಳವಡಿಕೆ, ಮಾನವ ಗ್ರಂಥಾಲಯ ಮತ್ತು ವಿದ್ಯಾರ್ಥಿ ಗ್ಯಾಲರಿ ಸೇರಿದಂತೆ ಫೈಂಡ್ ಉತ್ಸವದ ಭಾಗವಾಗಿ ಹಲವಾರು ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಏಕ್ಯ ವೃತ್ತಿಪರ ಅಭಿವೃದ್ಧಿ ಸಂಸ್ಥೆಯಿಂದ ‘ಪ್ರಾಂಪ್ಟಿಂಗ್ ದಿ ಫ್ಯೂಚರ್- ಎಐ ಫಾರ್ ಟ್ರಾನ್ಸ್‌ಫಾರ್ಮೇಟಿವ್ ಟೀಚಿಂಗ್’ ಪುಸ್ತಕದ ಬಿಡುಗಡೆಗೊಳಿಸಲಾಯಿತು.
ಸಿಎಂಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಸಿ. ರಾಮಮೂರ್ತಿ, ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಸಬಿತಾ ರಾಮಮೂರ್ತಿ, ಏಕ್ಯ ಶಾಲೆಗಳ ನಿರ್ದೇಶಕ ಕೆ.ಆರ್. ಜಯದೀಪ್, ಏಕ್ಯ ಶಾಲೆ ಸಂಸ್ಥಾಪಕಿ ಡಾ.ತ್ರಿಸ್ತ ರಾಮಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.