
ಸೈಕಲ್ ಪ್ಯೂರ್ ಅಗರಬತ್ತಿ
ಬೆಂಗಳೂರು: ರಾಷ್ಟ್ರೀಯ ಚಾಲಕರ ದಿನದ ಪ್ರಯುಕ್ತ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಚಾಲಕರಿಗೆ ಗುರುವಾರ ‘ವೈಬ್ ಪವರ್ ಬ್ಯಾಗ್’ ಏರ್ ಫ್ರೆಶ್‌ನರ್‌ಗಳನ್ನು ವಿತರಿಸಿತು.
ಓಲಾ ಕ್ಯಾಬ್ಸ್, ಇಂಡಿಯನ್ ಫೆಡರೇಶನ್ ಆಫ್ ಆ್ಯಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (ಐಎಫ್ಎಟಿ), ವಿಆರ್‌ಎಲ್ ಟ್ರಾವೆಲ್ಸ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ) ಮತ್ತು ದೆಹಲಿ ಸಾರಿಗೆ ಸಂಸ್ಥೆಗಳ (ಡಿಟಿಸಿ) ಸಹಬಾಗಿತ್ವದಲ್ಲಿ ದೇಶದ ಪ್ರಮುಖ ಹತ್ತು ನಗರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಚಾಲಕರಿಗೆ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ತಿಳಿಸಿದರು.
ವೈಬ್ ಪವರ್ ಬ್ಯಾಗ್ ಏರ್ ಫ್ರೆಶ್‌ನರ್ ಅನ್ನು ಪೈನಾಪಲ್ ಪಂಚ್, ಪಿಂಕ್ ಬ್ಲಾಸಮ್ ಮತ್ತು ಆಪಲ್ ಸಿನಮನ್ ಸುಗಂಧಗಳಲ್ಲಿ ರೂಪಿಸಲಾಗಿದ್ದು, ಈ ಪರಿಮಳ ವಾಹನವು ತಾಜಾತನದಿಂದ ಆಹ್ಲಾದಕರವಾಗಿ ಇರುವಂತೆ ನೋಡಿಕೊಳ್ಳಲಿದೆ ಎಂದು ಹೇಳಿದರು.
ಐಎಫ್‌ಎಟಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ್ ಭಾಗೇಶ್ ಸಾವರ್ಡೇಕರ್, ವಿಆರ್‌ಎಲ್ ಟ್ರಾವೆಲ್ಸ್ ಲಾಜಿಸ್ಟಿಕ್ಸ್ ವಿಭಾಗದ ಉಪಾಧ್ಯಕ್ಷ ಅಶೋಕ್, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.