ADVERTISEMENT

‘ಕನ್ನಡ ಚಿಂತನೆಗೆ ಹೊಸತನ ನೀಡಿದ ಡಿ.ಆರ್.ಎನ್’

ಶಾಸಕ ಕೆ.ಆರ್. ರಮೇಶ್ ಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 19:57 IST
Last Updated 30 ಮಾರ್ಚ್ 2021, 19:57 IST
ಸಂಸ ಥಿಯೇಟರ್ ನಗರದಲ್ಲಿ ಹಮ್ಮಿಕೊಂಡ ಡಿ.ಆರ್. ನಾಗರಾಜ್ 67 ಕಾರ್ಯಕ್ರಮದಲ್ಲಿ ಕಿ.ರಂ ಪ್ರಕಾಶನ ಹೊರತಂದ ‘ಅನನ್ಯ ಪ್ರತಿಭೆಯ ಪರಿ’ ವಿಮರ್ಶಾ ಬರಹಗಳ ಸಂಕಲನವನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ಬಿಡುಗಡೆ ಮಾಡಿದರು. ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಪ್ರೊ. ಜಾಫೆಟ್, ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ಕವಿ ಸಿದ್ಧಲಿಂಗಯ್ಯ, ಡಿ.ಆರ್. ನಾಗರಾಜ್ ಅವರ ಪುತ್ರಿ ಅಮೂಲ್ಯ ನಾಗರಾಜ್, ವಿಮರ್ಶಕಿ ಎಂ.ಎಸ್. ಆಶಾದೇವಿ, ಕೃತಿಯ ಸಂಪಾದಕ ಶಿವರಾಜ್ ಬ್ಯಾಡರಹಳ್ಳಿ, ಸಂಸ ಥಿಯೇಟರ್‌ನ ಸಂಸ ಸುರೇಶ್, ರಂಗ ಸಂಘಟಕ ರುದ್ರೇಶ್ ಅದರಂಗಿ ಹಾಗೂ ಪ್ರಕಾಶಕ ಜಿ.ವಿ. ಧನಂಜಯ ಇದ್ದರು.

ಬೆಂಗಳೂರು: ‘ಕನ್ನಡದ ಚಿಂತನೆಗಳಿಗೆ ಡಿ.ಆರ್. ನಾಗರಾಜ್ ಅವರು ಹೊಸ ತಾತ್ವಿಕ ಮಾದರಿಗಳನ್ನು ನೀಡಿದರು. ಅವರು ಕಾಲದ ಪರೀಕ್ಷೆ ಗೆದ್ದ ಜ್ಞಾನಿ’ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.

ಸಂಸ ಥಿಯೇಟರ್ ನಗರದಲ್ಲಿ ಹಮ್ಮಿಕೊಂಡ ಡಿ.ಆರ್. ನಾಗರಾಜ್ 67 ಕಾರ್ಯಕ್ರಮದಲ್ಲಿ ಕಿರಂ ಪ್ರಕಾಶನ ಹೊರತಂದ ‘ಅನನ್ಯ ಪ್ರತಿಭೆಯ ಪರಿ’ ವಿಮರ್ಶಾ ಬರಹಗಳ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾನು ಡಿ.ಆರ್. ನಾಗರಾಜ್ ಅವರನ್ನು ಮೊದಲ ಬಾರಿಗೆ ಪಿ. ಲಂಕೇಶ್ ಅವರ ಕಚೇರಿಯಲ್ಲಿ ನೋಡಿದ್ದೆ. 1994ರಲ್ಲಿ ವಿಧಾನ ಸಭಾಧ್ಯಕ್ಷನಾಗಿದ್ದಾಗ ಬೆಂಗಳೂರು ವಕೀಲರ ಸಂಘವು ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ‘ಸೃಷ್ಟಿಯಲ್ಲಿ ಕಾಗದ ತಿನ್ನುವ ಪ್ರಾಣಿ ಕತ್ತೆ ಮಾತ್ರ. ಹಾಗಾಗಿ, ಹಣವನ್ನು ತಿನ್ನುವವರೆಲ್ಲ ಕತ್ತೆಗಳು’ ಎಂದು ಹೇಳಿದೆ. ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು. ಆಗ ದೂರವಾಣಿ ಕರೆ ಮಾಡಿದ ನಾಗರಾಜ್, ‘ರಾಜ್ಯದಲ್ಲಿ ಇಂತಹ ಕತ್ತೆಗಳು ಎಷ್ಟಿವೆ ಎಂದು ಅಂದಾಜಿದೆಯೇ ನಿಮಗೆ’ ಎಂದು ಪ್ರಶ್ನಿಸಿದ್ದರು. ಜಗತ್ತಿನ ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದ ಅವರು 46ನೇ ವಯಸ್ಸಿಗೆ ನಮ್ಮಿಂದ ದೂರವಾದರು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಾಫೆಟ್ ಮಾತನಾಡಿ, ‘ನನಗೆ ತಾತ್ವಿಕ ಆಯಾಮ ಕಲಿಸಿದ ಗುರು ಅವರು. ನನ್ನ ಮತ್ತು ಅವರ ಸಂಬಂಧ ಬಸವಣ್ಣ ಹಾಗೂ ಅಲ್ಲಮಫ್ರಭುವಿನ ಸಂಬಂಧದಂತಿತ್ತು. ಅವರು ಜ್ಞಾನದ ಮೂಲಕ ಅಮರತ್ವ ಪಡೆದಿದ್ದಾರೆ’ ಎಂದರು.

ವಿಮರ್ಶಾ ಬರಹಗಳ ಸಂಕಲನ ಕುರಿತು ಮಾತನಾಡಿದ ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ‘ನಾಗರಾಜ್ ಅವರ ವಿಮರ್ಶೆಯ ಚಿಂತನೆಗಳು ಇಂದಿಗೂ ಪ್ರಸಿದ್ಧವಾಗಿವೆ. ಅನೇಕ ಯುವ ವಿಮರ್ಶಕರನ್ನು, ಚಿಂತಕರನ್ನು ಬೆಳೆಸುವಲ್ಲಿ ಸಹಾಯಕವಾಗಿವೆ. ‌ಈ ಕೃತಿಯು ಕನ್ನಡ ವಿಮರ್ಶಾ ಜಗತ್ತಿಗೆ ಬಹುಮುಖ್ಯವಾದ ಕೃತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮರ್ಶಕಿ ಎಂ.ಎಸ್. ಆಶಾದೇವಿ, ‘ನನ್ನ ಆಲೋಚನೆ ಮತ್ತು ಬರವಣಿಗೆಯನ್ನು ಸಂಪೂರ್ಣವಾಗಿ ಬದಲಿಸಿದ ಅವರು, ನನ್ನ ವ್ಯಕ್ತಿತ್ವವನ್ನು ಒಡೆದು ಕೂಡಿಸಿದರು. ಯು.ಆರ್. ಅನಂತಮೂರ್ತಿ ಹೇಳಿದಂತೆ ಡಿ.ಆರ್.ಎನ್. ತೃತೀಯ ಜಗತ್ತಿನ ದಾರ್ಶನಿಕ
ರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.