ADVERTISEMENT

ಕೊಕೇನ್‌ ಸಹಿತ ನೈಜೀರಿಯಾ ಪ್ರಜೆ ಬಂಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 20:03 IST
Last Updated 3 ಅಕ್ಟೋಬರ್ 2019, 20:03 IST
ಜಾಕ್ವಿ ಮೈಕಲ್
ಜಾಕ್ವಿ ಮೈಕಲ್   

ಬೆಂಗಳೂರು: ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರಿನಲ್ಲಿ ವಾಸವಿದ್ದ ಜಾಕ್ವಿ ಮೈಕಲ್ ಬಂಧಿತ ವ್ಯಕ್ತಿ.

ಆರೋಪಿ ಯಿಂದ ₹5 ಲಕ್ಷ ಮೌಲ್ಯದ 50 ಗ್ರಾಂ ಕೊಕೇ ನ್ ವಶಪಡಿಸಿಕೊಳ್ಳಲಾಗಿದೆ. ಕೊಕೇನ್ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ADVERTISEMENT

ವೈದ್ಯಕೀಯ ವೀಸಾದಡಿ 2017ರಲ್ಲಿ ಮೂರು ತಿಂಗಳ ಅವಧಿಗೆ ಆರೋಪಿ ನಗರಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದು ಒಂದೂವರೆ ವರ್ಷ ಕಳೆದರೂ ಅಕ್ರಮವಾಗಿ ನೆಲೆಸಿದ್ದ.

ಕೊಕೇನ್ ಖರೀದಿಸಿ, ಗ್ರಾಂ ಲೆಕ್ಕದಲ್ಲಿ ಪರಿಚಿತರಿಗೆ ಮಾರಾಟ ಮಾಡುತ್ತಿದ್ದ. ‘ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಪಾಸ್‌ಪೋರ್ಟ್ ಕಳೆದು ಹೋಗಿದೆ’ ಎಂದು ಹೇಳುತ್ತಿರುವ ಆರೋಪಿ, ನೈಜೀರಿಯಾದ ಮತ್ತೊಬ್ಬ ಪ್ರಜೆ ಕೊಕೇನ್ ಕೊಟ್ಟಿರುವುದಾಗಿ ಹೇಳಿದ್ದಾನೆ ಎಂದು ಹೆಣ್ಣೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.