ಬೆಂಗಳೂರು:ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ವೈಭವ್ ಜೈನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ವೈಭವ್ ಜೈನ್ ಇತ್ತೀಚೆಗೆ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತನಿಗೆ ಕೊರೊನಾ ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿರುವ ಆತನನ್ನು ಸಿಸಿಬಿ ಇದೀಗ ಬಂಧಿಸಿದೆ.
ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆ ವೈಭವ್ ಜೈನ್ ಸಂಪರ್ಕವಿಟ್ಟುಕೊಂಡಿದ್ದ. ಸಿನಿ ತಾರೆಯರು, ಉದ್ಯಮಿಗಳು, ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿಗಾಗಿ ಪಾರ್ಟಿ ಆಯೋಜಿಸಲಾಗುತ್ತಿತ್ತು. ಅದರ ಹೊಣೆಯನ್ನು ವೈಭವ್ ಜೈನ್ ವಹಿಸಿಕೊಳ್ಳುತ್ತಿದ್ದ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ... ಮೂತ್ರದ ಬದಲು ನೀರು ಕೊಟ್ಟು ವೈದ್ಯರ ದಿಕ್ಕು ತಪ್ಪಿಸಿದ ರಾಗಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.