ADVERTISEMENT

ಆಂಧ್ರದಿಂದ ಡ್ರಗ್ಸ್ ತಂದು ಮಾರುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 19:14 IST
Last Updated 2 ಜುಲೈ 2021, 19:14 IST

ಬೆಂಗಳೂರು: ಆಂಧ್ರಪ್ರದೇಶದಿಂದ ನಗರಕ್ಕೆ ಗಾಂಜಾ ತಂದು ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೊಮ್ಮನಹಳ್ಳಿ ವಿರಾಟ್‌ ನಗರದ ಜಿಲಾಲ್ ಖಾನ್ ಅಲಿಯಾಸ್ ಜುನೈದ್ (20) ಹಾಗೂ ಕೋರಮಂಗಲದ ಲಕ್ಕಸಂದ್ರದ ನಿಶಾಂತ್ ಹರಿರಾಮ್ (25) ಬಂಧಿತರು. ಅವರಿಂದ 12 ಕೆ.ಜಿ ಗಾಂಜಾ, 69 ಎಲ್‌ಎಸ್‌ಡಿ ಕಾಗದದ ಚೂರು, 22 ಗ್ರಾಂ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳಿಗೆ ಆರೋಪಿಗಳು ಡ್ರಗ್ಸ್ ಮಾರುತ್ತಿದ್ದರು. ಬಿಟಿಎಂ ಲೇಔಟ್‌ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಗ್ರಾಹಕರಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಕೋಳಿ ಅಂಗಡಿಯಲ್ಲಿ ಕೆಲಸ: ‘ಆರೋಪಿ ಜಿಲಾಲ್ ಖಾನ್, ಬೊಮ್ಮನಹಳ್ಳಿಯ ಕೋಳಿ ಮಾಂಸ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ನಿಶಾಂತ್, ಖಾಸಗಿ ಕಂಪನಿ ನೌಕರ. ಇಬ್ಬರೂ ಆಂಧ್ರಪ್ರದೇಶದಲ್ಲಿ ಗಾಂಜಾ ಖರೀದಿಸಿ ನಗರಕ್ಕೆ ತಂದು ಪ್ರತ್ಯೇಕವಾಗಿ ಮಾರಾಟ ಮಾರುತ್ತಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.