ADVERTISEMENT

ಗಾಂಜಾ‌ ಮತ್ತಿನಲ್ಲಿದ್ದ ಹದಿನೈದು ಮಂದಿಗೆ ಸಾರ್ವಜನಿಕರಿಂದ ಥಳಿತ: ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:47 IST
Last Updated 14 ಜುಲೈ 2022, 5:47 IST
ಕೆ.ಆರ್.ಪುರ ಠಾಣಾಧಿಕಾರಿ ನಂದೀಶ್ ಅವರು ಗ್ರೀನ್ ವುಡ್ ಬಡಾವಣೆಗಳ ನಿವಾಸಿಗಳ ಜೊತೆ ಸಭೆ ನಡೆಸಿದರು
ಕೆ.ಆರ್.ಪುರ ಠಾಣಾಧಿಕಾರಿ ನಂದೀಶ್ ಅವರು ಗ್ರೀನ್ ವುಡ್ ಬಡಾವಣೆಗಳ ನಿವಾಸಿಗಳ ಜೊತೆ ಸಭೆ ನಡೆಸಿದರು   

ಕೆ.ಆರ್.ಪುರ:ಗಾಂಜಾ‌ ಮತ್ತಿನಲ್ಲಿದ್ದ ಹದಿನೈದು ಮಂದಿಯನ್ನು ಸಾರ್ವಜನಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾರಣಾಸಿಯ ಗ್ರೀನ್ ವುಡ್ ಬಡಾವಣೆಯಲ್ಲಿ ನಡೆದಿದೆ.

‘ಬಡಾವಣೆ ಸಮೀಪದ ಖಾಲಿ ನಿವೇಶನ ಬಳಿ ದಿನೆ ದಿನೇ ಗಾಂಜಾ ವ್ಯಸನಿಗಳ ಹಾವಳಿ ಮೀತಿ ಮೀರಿತ್ತು. ಬಡಾವಣೆ ನಿವಾಸಿಗಳಿಗೆ ಪ್ರತಿದಿನ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು. ಇದರಿಂದ ರೋಸಿಹೋದ ನಿವಾಸಿಗಳು ಮಂಗಳವಾರ ರಾತ್ರಿ 8:30ರ ಸಮಯದಲ್ಲಿ ಗಾಂಜಾ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದ ಹದಿನೈದು ಮಂದಿ ವ್ಯಸನಿಗಳನ್ನು ಹಿಡಿದು ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಪೊಲೀಸರು ವ್ಯಸನಿಗಳನ್ನು ವಶಕ್ಕೆ ಪಡೆದು ಸಾರ್ವಜನಿಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ನಂತರ ಬಿಟ್ಟು ಕಳುಹಿಸಿದ್ದಾರೆ. ಗಾಂಜಾ ಪೂರೈಸುತ್ತಿದ್ದ ಪೆಡ್ಲರ್‌ಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಾಂಜಾ ಪ್ರಕರಣ ಸಂಬಂಧ ಬುಧವಾರ ಕೆ.ಆರ್.ಪುರ ಠಾಣಾಧಿಕಾರಿ ನಂದೀಶ್ ನೇತೃತ್ವದಲ್ಲಿ ಗ್ರೀನ್ ವುಡ್ ಬಡಾವಣೆಗಳ ನಿವಾಸಿಗಳ ಜೊತೆ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.