ADVERTISEMENT

ಕೇರಳ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ ₹1 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 18:32 IST
Last Updated 26 ಫೆಬ್ರುವರಿ 2026, 18:32 IST
   

ಬೆಂಗಳೂರು: ಕೇರಳ ರಾಜ್ಯದ ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯಪಡೆ ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಲೇಔಟ್‌ವೊಂದರ ಮನೆ ಮೇಲೆ ದಾಳಿ ನಡೆಸಿ ₹1 ಕೋಟಿ ಮೌಲ್ಯದ 2 ಕೆ.ಜಿ.ಎಂಡಿಎಂ ಪತ್ತೆ ಮಾಡಿದೆ.

ವಿದೇಶದಿಂದ ಮಾದಕ ವಸ್ತು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ಧೀರೇಶ್ ಕುಟುಮ್ ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ‌

ಆರೋಪಿ ಅಸ್ಸಾಂ ರಾಜ್ಯದವನಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ರಮೇಶ್ ರೆಡ್ಡಿ ಲೇಔಟ್‌ನಲ್ಲಿ ವಾಸವಾಗಿದ್ದ. ನಗರದಿಂದಲೇ ವಿವಿಧ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸ್ ಅಧಿಕಾರಿ ಸತ್ಯಜಿತ್ ನೇತೃತ್ವದ ತಂಡ ದಾಳಿ ನಡೆಸಿದೆ.

ದಾಳಿ ವೇಳೆ ಆರೋಪಿಯ ಮನೆಯಲ್ಲಿ ನಾಲ್ಕು ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಮಕ್ಕಳು ಸೇವಿಸುವ ಆಹಾರ ಸೆರೆಲಾಕ್ ಪ್ಯಾಕೆಟ್‌ಗಳ ಒಳಗೆ ಮಾದಕ ವಸ್ತುವನ್ನು ಅಡಗಿಸಿದ್ದ. ಮನೆಯಲ್ಲಿ 15ಕ್ಕೂ ಹೆಚ್ಚು ಖಾಲಿ ಸೆರೆಲಾಕ್ ಕವರ್‌ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಔಷಧಿಗಳ ಕವರ್‌ನಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ADVERTISEMENT