ADVERTISEMENT

₹4 ಲಕ್ಷ ಮೌಲ್ಯದ ಮಾದಕ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 7:03 IST
Last Updated 17 ಸೆಪ್ಟೆಂಬರ್ 2020, 7:03 IST

ಬೆಂಗಳೂರು: ಡ್ರಗ್ಸ್ ಜಾಲದ ವಿರುದ್ಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಎಂ.ಜಿ.ರಸ್ತೆಯ ಕಟ್ಟಡವೊಂದರ ಬಳಿ ಮಾದಕ ವಸ್ತುಗಳಾದ ಎಲ್‍ಎಸ್‍ಡಿ ಪೇಪರ್, ಎಕ್ಸ್‌ಟೆಸಿ ಮಾತ್ರೆಗಳು ಹಾಗೂ ಟಿಎಚ್‍ಸಿ ಜೆಲ್ಲಿಗಳನ್ನು ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಕೊತ್ತನೂರಿನ ಜಾನ್ ನಿಕೋಲಸ್ (21) ಹಾಗೂ ಜೆ.ಪಿ.ನಗರದ ಇರ್ಫಾನ್ ಶೇಖ್ (29) ಬಂಧಿತರು.

ಬಂಧಿತರಿಂದ ₹4 ಲಕ್ಷ ಬೆಲೆ ಬಾಳುವ 50 ಟಿಎಚ್‍ಸಿ ಜೆಲ್ಲಿಗಳು, 34 ಎಕ್ಸ್‌ಟೆಸಿ ಮಾತ್ರೆಗಳು ಹಾಗೂ 27 ಎಲ್‍ಎಸ್‍ಡಿ ಸ್ಟ್ರಿಪ್ಸ್, ಎರಡು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT