ADVERTISEMENT

ಪಾಲಿಕೆ ಬಜೆಟ್ ಪರಿಷ್ಕರಣೆಗೆ ದಲಿತ ಸಂಘಟನೆಗಳ ಆಗ್ರಹ

ಎಸ್‍ಸಿ, ಎಸ್‍ಟಿ ವರ್ಗಗಳಿಗೆ ಕಡಿಮೆ ಅನುದಾನ ಆರೋಪ

​ಪ್ರಜಾವಾಣಿ ವಾರ್ತೆ
Published 29 ಮೇ 2020, 17:08 IST
Last Updated 29 ಮೇ 2020, 17:08 IST
ಸಿ.ಎಸ್.ರಘು ನೇತೃತ್ವದಲ್ಲಿ ಎಸ್.ಸಿ, ಎಸ್‍.ಟಿ ಆಯೋಗದ ಕಾರ್ಯದರ್ಶಿ ಶಿವರಾಂ ಅವರಿಗೆ ದೂರು ಸಲ್ಲಿಸಲಾಯಿತು. ಸಮಿತಿ ಪದಾಧಿಕಾರಿಗಳು ಇದ್ದರು.
ಸಿ.ಎಸ್.ರಘು ನೇತೃತ್ವದಲ್ಲಿ ಎಸ್.ಸಿ, ಎಸ್‍.ಟಿ ಆಯೋಗದ ಕಾರ್ಯದರ್ಶಿ ಶಿವರಾಂ ಅವರಿಗೆ ದೂರು ಸಲ್ಲಿಸಲಾಯಿತು. ಸಮಿತಿ ಪದಾಧಿಕಾರಿಗಳು ಇದ್ದರು.   

ಬೆಂಗಳೂರು: ಪಾಲಿಕೆ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನುದಾನ ಮೀಸಲಿಡುವ ನಿಯಮಗಳನ್ನು ಗಾಳಿಗೆ ತೂರಿದ್ದು, ಬಜೆಟ್ ಅನುಷ್ಠಾನಗೊಳಿಸದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಶುಕ್ರವಾರ ದೂರು ಸಲ್ಲಿಸಿದರು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ರಘು, 'ದಲಿತರು ಹಾಗೂ ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಬಜೆಟ್‍ನಲ್ಲಿ ಶೇ 24.10ರಷ್ಟು ಅನುದಾನ ಮೀಸಲಿಡಬೇಕು ಎಂಬ ಕಾನೂನನ್ನು ಈ ಬಜೆಟ್‍ನಲ್ಲಿ ಪಾಲಿಸಿಲ್ಲ. ನಿಯಮದ ಪ್ರಕಾರ ₹800 ಕೋಟಿ ಮೀಸಲಿಡಬೇಕಿತ್ತು. ಆದರೆ, ಕೇವಲ ₹400 ಕೋಟಿ ಅನುದಾನ ಮೀಸಲಿಡುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ‘ ಎಂದು ದೂರಿದರು.

'ಕೂಡಲೇ ಪಾಲಿಕೆ ಬಜೆಟ್ ಪರಿಷ್ಕರಣೆಯಾಗಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಗೃಹ ಕಚೇರಿ ಹಾಗೂ ಪಾಲಿಕೆ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು' ಎಂದು ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.