ADVERTISEMENT

ಬೆಂಗಳೂರು: ವಿಜೃಂಭಣೆಯ ದುರ್ಗಾ ಪೂಜೆಗೆ ಸಿದ್ಧತೆ

140ಕ್ಕೂ ಹೆಚ್ಚು ಪೆಂಡಾಲ್ ನಿರ್ಮಾಣ ಸಾಧ್ಯತೆ:

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 21:06 IST
Last Updated 28 ಸೆಪ್ಟೆಂಬರ್ 2022, 21:06 IST
ನಗರದ ಕಾಕ್ಸ್‌ಟೌನ್‌ನಲ್ಲಿ ದುರ್ಗಾ ಮೂರ್ತಿ ತಯಾರಕರೊಬ್ಬರು ಅಂತಿಮ ಟಚಪ್ ನೀಡುತ್ತಿರುವುದು. ಪ್ರಜಾವಾಣಿ ಚಿತ್ರ/ರಿಷಿತಾ ಖನ್ನಾ
ನಗರದ ಕಾಕ್ಸ್‌ಟೌನ್‌ನಲ್ಲಿ ದುರ್ಗಾ ಮೂರ್ತಿ ತಯಾರಕರೊಬ್ಬರು ಅಂತಿಮ ಟಚಪ್ ನೀಡುತ್ತಿರುವುದು. ಪ್ರಜಾವಾಣಿ ಚಿತ್ರ/ರಿಷಿತಾ ಖನ್ನಾ   

ಬೆಂಗಳೂರು: ಎರಡು ವರ್ಷಗಳ ನಂತರ ದುರ್ಗಾ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲು ನಗರದ ಜನ ಸಜ್ಜಾಗುತ್ತಿದ್ದಾರೆ. ನಗರದಾದ್ಯಂತ 140ಕ್ಕೂ ಹೆಚ್ಚು ಪೆಂಡಾಲುಗಳು ನಿರ್ಮಾಣ ಆಗುವ ಸಾಧ್ಯತೆ ಇದೆ.

ಪೆಂಡಾಲ್‌ಗಳಿಗೆ ಅನುಮತಿ ನೀಡುವ ಕಾರ್ಯವನ್ನು ಬಿಬಿಎಂಪಿ ವಲಯವಾರು ಆರಂಭಿಸಿದೆ. ‘100ಕ್ಕೂ ಹೆಚ್ಚು ಅರ್ಜಿಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಇವುಗಳ ಪೈಕಿ ಹೆಚ್ಚಿನ ಅರ್ಜಿಗಳು ಪೂರ್ವ ವಲಯದ ಹಲಸೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಬಂದಿವೆ. ದಕ್ಷಿಣ ವಲಯದಿಂದಲೂ ಹೆಚ್ಚಿನ ಅರ್ಜಿಗಳು ಬಂದಿವೆ. ಉಳಿದ ವಲಯಗಳಲ್ಲಿ ದುರ್ಗಾ ಪೂಜೆ ಆಚರಣೆ ಕಡಿಮೆ ಇದೆ’ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಲವು ಸಂಘ–ಸಂಸ್ಥೆಗಳು ಈಗಾಗಲೇ ಆಚರಣೆಗೆ ಸಿದ್ಧತೆ ನಡೆಸುತ್ತಿವೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಸರಳವಾಗಿಆಚರಿಸಲಾಗಿತ್ತು.ಈವರ್ಷಭಾರಿಜನಸೇರುವನಿರೀಕ್ಷೆಇದೆ. ‘ಕನಿಷ್ಠ 140 ಪೆಂಡಾಲುಗಳು ನಿರ್ಮಾಣವಾಗುವ ಸಾಧ್ಯತೆ ಇದೆ. ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುರ್ಗಾ ಪೂಜೆಯನ್ನು ಅ.1 ರಂದು ಉದ್ಘಾಟನೆ ಮಾಡುವರು. ಅ.4 ರವರೆಗೆ ಪ್ರತಿದಿನ ಕನಿಷ್ಠ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ’ ಎಂದು ಬೆಂಗಳೂರು ದುರ್ಗಾಪೂಜಾ ಸಮಿತಿಯ(ಬಿಡಿಪಿಸಿ) ‌ರುದ್ರ ಶಂಕರ್ ರಾಯ್ ಹೇಳಿದರು.

ADVERTISEMENT

‘ಹಿರಿಯ ಕಲಾವಿದ ಜಾಮಿನಿ ರಾಯ್ ಅವರ ಕಲಾಕೃತಿಗಳೊಂದಿಗೆ ದುರ್ಗಾಪೂಜೆ ಆಚರಿಸಲು ಯೋಚಿಸಿದ್ದೇವೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಪಶ್ಚಿಮ ಬಂಗಾಳದ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ’ ಎಂದು 45ನೇ ವರ್ಷದ ದುರ್ಗಾಪೂಜೆ ಆಚರಣೆ ಮಾಡುತ್ತಿರುವ ಉತ್ತರ ಬೆಂಗಳೂರು ಸಾಂಸ್ಕೃತಿಕ ಸಮಿತಿಯ ಕಲ್ಯಾಣ್ ಪಾಠಕ್ ತಿಳಿಸಿದರು.

‘ಕಲಾ ವಸ್ತು ವಿಷಯ ಆಧರಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಿದ್ದೇವೆ. ಭಾರತದ ಅತ್ಯಂತ ಹಳೆಯ ಕಲಾ ಪ್ರಕಾರವಾದ ಮಂಡಲ ಕಲೆಯನ್ನು ಮೊದಲ ಆಧುನಿಕ ಕಲಾ ಪ್ರಕಾರವಾದ ಪಶ್ಚಿಮ ಬಂಗಾಳದ ಕಾಳಿ ಘಾಟ್‌ ಚಿತ್ರಗಳೊಂದಿಗೆ ಸಂಯೋಜಿಸಲು ಉದ್ದೇಶಿಸಿದ್ದೇವೆ’ ಎಂದು ಬೊಂಗೋಧರ ಸಾಂಸ್ಕೃತಿಕ ಸಂಘದ ಅಪರಾಜಿತಾ ರಾಯ್ ಹೇಳಿದರು.

ಅ.1ರಂದು ಪೂಜೆ ಆರಂಭವಾಗಿ 5ರವರೆಗೆ ನಡೆಯಲಿವೆ. ದುರ್ಗಾ ಮೂರ್ತಿಗಳನ್ನು ಹಲವು ಕೆರೆಗಳಲ್ಲಿ ಬಿಡಲು ಬಿಬಿಎಂಪಿ ವ್ಯವಸ್ಥೆ ಮಾಡಿಕೊಂಡಿದೆ. ಹಲಸೂರು ಕೆರೆ ಮತ್ತು ಸ್ಯಾಂಕಿ ಕೆರೆಗಳಲ್ಲಿ ಹೆಚ್ಚಿನ ಮೂರ್ತಿಗಳನ್ನು ಬಿಡಿಸಲು ಸಿದ್ಧತೆ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.