ADVERTISEMENT

ಸಹಕಾರ ನಗರದಲ್ಲಿ ದಸರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:19 IST
Last Updated 25 ಸೆಪ್ಟೆಂಬರ್ 2025, 23:19 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ದಸರಾ ಹಬ್ಬದ ಅಂಗವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದ ತಂಡ ಹಾಗೂ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಸಹಯೋಗದಲ್ಲಿ ಸಹಕಾರನಗರದ ಮೈದಾನದಲ್ಲಿ ಸೆಪ್ಟೆಂಬರ್‌ 27 ಮತ್ತು 28ರಂದು ‘ದಸರಾ ಉತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 

ADVERTISEMENT

ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ, ಸಂಗೀತ ಸಂಜೆ, ಯಕ್ಷಗಾನ, ದಾಂಡಿಯಾ ನೃತ್ಯ ಇತ್ಯಾದಿ ಕಾರ್ಯಕ್ರಮ ಗಳು ನಡೆಯಲಿವೆ. ಅಲ್ಲದೆ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳು ಇರಲಿವೆ.

ಸೆ. 27ರಂದು ಸಂಜೆ 4ಕ್ಕೆ ಲಲಿತ ಸಹಸ್ರನಾಮ, ಚಾಮುಂಡೇಶ್ವರಿ ದೇವಿಯ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 5ಕ್ಕೆ ಸಾಮಗಾನ ಸಂಗೀತ ಸಭಾದ ಲಕ್ಷ್ಮಿ ವರುಣ್ ಮತ್ತು ತಂಡದಿಂದ ‘ದೇವರನಾಮ ಗಾಯನ’ ನಡೆಯಲಿದ್ದು, 6ಕ್ಕೆ ದೃಷ್ಟಿ ಆರ್ಟ್‌ ಸೆಂಟರ್‌ನ
ಅನುರಾಧಾ ವಿಕ್ರಾಂತ್ ತಂಡದಿಂದ ‘ದುರ್ಗಾದೇವಿಯ ಒಂಬತ್ತು ಅವತಾರಗಳ’ ನೃತ್ಯ ನಾಟಕ ಪ್ರಸ್ತುತಪಡಿಸ ಲಾಗುತ್ತದೆ.

ರಾತ್ರಿ 8ಕ್ಕೆ ಸಹಕಾರನಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದಿಂದ ‘ದಾಂಡಿಯಾ ನೃತ್ಯ’ ಪ್ರದರ್ಶನ ನಡೆಯಲಿದೆ. 

ಸೆ. 28ರಂದು ಸಂಜೆ 4ಕ್ಕೆ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ನಡೆಯಲಿದ್ದು, 6ಕ್ಕೆ ಶಂಕರಿ–ನೃತ್ಯೋಮಾ ಅಕಾಡೆಮಿ ಆಫ್‌ ಪರ್ಫಾಮಿಂಗ್‌ ಆರ್ಟ್ಸ್‌ನಿಂದ ‘ಭರತನಾಟ್ಯ’ ಪ್ರದರ್ಶನ, 6.15ಕ್ಕೆ ಪಂಜು ಪ್ರದರ್ಶನ, 7ಕ್ಕೆ ಕೆರೆಮನೆ ಶಿವಾನಂದ ಹೆಗಡೆ ಮತ್ತು ತಂಡದಿಂದ ‘ಸೀತಾಪಹರಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.