ADVERTISEMENT

ಒಂದೇ ಗಂಟೆಯಲ್ಲಿ ಮುಕ್ತಾಯ

ಕಾಮೆಡ್‌ – ಕೆ ಸೀಟು ಆಯ್ಕೆ, ಪೋಷಕರ ಕೋರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:32 IST
Last Updated 25 ಮೇ 2019, 19:32 IST
ಶಾಂತಾರಾಂ
ಶಾಂತಾರಾಂ   

ಬೆಂಗಳೂರು: ಕಾಮೆಡ್‌–ಕೆ ಮೂಲಕ ಎಂಜಿನಿಯರಿಂಗ್‌ ಸೀಟು ಆಯ್ಕೆ ಪ್ರಕ್ರಿಯೆ ಕೇವಲ ಒಂದು ಗಂಟೆಯಲ್ಲಿ ಮುಗಿಯುತ್ತದೆ. ಪೋಷಕರ ಕೋರಿಕೆಯ ಮೇರೆಗೆ ಆನ್‌ಲೈನ್‌ ಬದಲಿಗೆ ಆಫ್‌ಲೈನ್‌ನಲ್ಲಿ ಕೌನ್ಸೆಲಿಂಗ್‌ ನಡೆಯುತ್ತದೆ ಎಂದು ವಿಶೇಷಾಧಿಕಾರಿ ಡಾ.ಶಾಂತಾರಾಂ ನಾಯಕ್‌ ಹೇಳಿದರು.

ಶೈಕ್ಷಣಿಕ ಮೇಳದಲ್ಲಿ ಅವರು ಮಾಹಿತಿ ನೀಡಿದರು.

‘ಅಭ್ಯರ್ಥಿಯ ಬಯೊಮೆಟ್ರಿಕ್‌ ಪರಿಶೀಲನೆ ಇರುವುದರಿಂದ ಕೌನ್ಸೆಲಿಂಗ್‌ಗೆ ಅಭ್ಯರ್ಥಿಯ ಹಾಜರಾತಿ ಕಡ್ಡಾಯ. ಕೈಪಿಡಿಯಲ್ಲಿ ತಿಳಿಸಿದಂತೆ ಎಲ್ಲ ಮೂಲ ದಾಖಲೆಗಳನ್ನೂ ತಂದಿದ್ದೇ ಆದರೆ ಒಂದೇ ಗಂಟೆಯಲ್ಲಿ ಪ್ರಕ್ರಿಯೆಗಳೆಲ್ಲವೂ ಕೊನೆಗೊಳ್ಳುತ್ತವೆ. ತಡವಾಗಿ ಬಂದವರಿಗೆ ಅದೇ ದಿನದ ಕೊನೆಯಲ್ಲಿ ಕೌನ್ಸೆಲಿಂಗ್‌ ನಡೆಯುತ್ತದೆ. ಅಭ್ಯರ್ಥಿಯ ಭಾವಚಿತ್ರಸಹಿತ ಇರುವ ಕಾಲೇಜು ಪ್ರವೇಶ ಆದೇಶಪತ್ರವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕಳೆದಕೊಂಡರೆ, ಇನ್ನೊಂದು ಪ್ರತಿ ಕೊಡುವುದೇ ಇಲ್ಲ. ಅಂತಹವರ ಸೀಟು ಕಳೆದುಹೋಯಿತು ಎಂದೇ ಅರ್ಥ’ ಎಂದು ಶಾಂತಾರಾಂ ವಿವರಿಸಿದರು.

ADVERTISEMENT

‘ಕೇವಲ ಎರಡು ಸುತ್ತಿನ ಆಯ್ಕೆ ಪ್ರಕ್ರಿಯೆ ಇರುತ್ತದೆ. ಜಯನಗರದ ನಂದಾ ಟಾಕೀಸ್‌ ಬಳಿಯ ಎನ್‌ಎಂಕೆಆರ್‌ವಿ ಕಾಲೇಜು ಆವರಣದಲ್ಲಷ್ಟೇ ಕೌನ್ಸೆಲಿಂಗ್‌ ನಡೆಯುತ್ತದೆ. ವೆಬ್‌ಸೈಟ್‌ ಅನ್ನು ಆಗಾಗ ಗಮನಿಸುತ್ತಿರಬೇಕು. ಟ್ಯೂಷನ್‌ ಶುಲ್ಕದ ರೂಪದಲ್ಲಿ ಆರಂಭದಲ್ಲಿ ₹55 ಸಾವಿರ ಪಾವತಿಸಬೇಕು. ಒಟ್ಟು ಶುಲ್ಕ ₹1.88 ಲಕ್ಷ. ಸೀಟು ತ್ಯಜಿಸಿದರೆ 10 ದಿನದೊಳಗೆ ಶುಲ್ಕ ವಾಪಸ್‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.