ADVERTISEMENT

₹ 1.50 ಕೋಟಿ ಮೌಲ್ಯದ 15 ಸಾವಿರ ಪುಸ್ತಕಗಳ ಕೊಡುಗೆ: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:47 IST
Last Updated 28 ಜೂನ್ 2021, 21:47 IST
ಪುಸ್ತಕ ಹಸ್ತಾಂತರ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ ಎಸ್. ಹೊಸಮನಿ, ಸಚಿವ ಎಸ್. ಸುರೇಶ್ ಕುಮಾರ್, ನಾಗೇಂದ್ರ ಪ್ರಸಾದ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಇದ್ದರು
ಪುಸ್ತಕ ಹಸ್ತಾಂತರ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ ಎಸ್. ಹೊಸಮನಿ, ಸಚಿವ ಎಸ್. ಸುರೇಶ್ ಕುಮಾರ್, ನಾಗೇಂದ್ರ ಪ್ರಸಾದ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಇದ್ದರು   

ಬೆಂಗಳೂರು: ‘ನಗರದಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಅಮೆರಿಕದ ಅಟ್ಲಾಂಟಾ ವಿ-ಸ‌ರ್ವ್ ಇಂಟರ್ ನ್ಯಾಷನಲ್ ಫೌಂಡೇಷನ್ ಸಂಸ್ಥೆ ₹ 1.50 ಕೋಟಿ ಮೌಲ್ಯದ‌ 15 ಸಾವಿರ ಅತ್ಯುತ್ಕೃಷ್ಟ ಪುಸ್ತಕಗಳನ್ನು ನೀಡಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಪುಸ್ತಕಗಳನ್ನು ಸೋಮವಾರ ಸ್ವೀಕರಿಸಿ ಮಾತನಾಡಿದ ಅವರು, ‘ವಿ-ಸರ್ವ್ ಇಂಟರ್ ನ್ಯಾಷನಲ್ ಫೌಂಡೇಷನ್ ಸಂಸ್ಥೆ ಅಧ್ಯಕ್ಷ ಡಾ. ವಿಜಯರಾಘವನ್ ಅವರು ತಮ್ಮ ಸಂಸ್ಥೆಯಿಂದ ನೀಡಿದ ಮೌಲ್ಯಯುತ ಪುಸ್ತಕಗಳನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ಡಾ. ನಾಗೇಂದ್ರ ಪ್ರಸಾದ್ ಅವರು ನಗರ ಕೇಂದ್ರ ಗ್ರಂಥಾಲಯಕ್ಕೆ ಹಸ್ತಾಂತರಿಸಿದ್ದಾರೆ’ ಎಂದರು.

‘ಅಮೆರಿಕದ ಅಟ್ಲಾಂಟದಲ್ಲಿ ಎ.ಕೆ. ಎಜು-ಸ್ಯಾಟ್ ಸಂಸ್ಥೆಯು ಭಾರತದ ಇಸ್ರೋ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಭಾರತದಲ್ಲಿನ ಮೂಲಸೌಕರ್ಯಗಳಿಲ್ಲದ ಕಟ್ಟಕಡೆಯ ಗ್ರಾಮಗಳಲ್ಲಿನ ಶಿಕ್ಷಣ ವಂಚಿತ ಮಕ್ಕಳಿಗೆ ಎ.ಕೆ. ಎಜು-ಸ್ಯಾಟ್ ಮೂಲಕ ಮೂಲಭೂತ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದು, ಅದರ ಭಾಗವಾಗಿ ಈ ಪುಸ್ತಕಗಳನ್ನು ನೀಡಿದೆ’ ಎಂದು ಹೇಳಿದರು.

ADVERTISEMENT

‘ಕ್ರೀಡೆ, ವೈದ್ಯಕೀಯ ಶಿಕ್ಷಣ ಮತ್ತು ವಿಜ್ಞಾನ, ಶಾಸ್ತ್ರೀಯ ಹಾಗೂ ನವನವೀನ ಕಾದಂಬರಿಗಳು, ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಗಳು, ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಮತ್ತು ಮೆಕ್ಯಾನಿಕಲ್‍ ಎಂಜಿನಿಯರಿಂಗ್ ಸೇರಿದಂತೆ ಹಲವು ಪ್ರಕಾರದ ಪುಸ್ತಕಗಳನ್ನು ಇದರಲ್ಲಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.