ADVERTISEMENT

‘ಈಜಿಪುರ ಮೇಲ್ಸೇತುವೆಯಲ್ಲಿ ಬಿರುಕು: ದೊಡ್ಡ ಸಮಸ್ಯೆಯಲ್ಲ’

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 19:52 IST
Last Updated 25 ಆಗಸ್ಟ್ 2025, 19:52 IST
ಈಜಿಪುರ ಮೇಲ್ಸೇತುವೆ ಸೆಗ್‌ಮೆಂಟ್‌ನಲ್ಲಿ ಬಿರುಕು ಬಿಟ್ಟಿರುವುದು
ಈಜಿಪುರ ಮೇಲ್ಸೇತುವೆ ಸೆಗ್‌ಮೆಂಟ್‌ನಲ್ಲಿ ಬಿರುಕು ಬಿಟ್ಟಿರುವುದು   

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಈಜಿಪುರ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಸಣ್ಣ ಬಿರುಕು ಪತ್ತೆಯಾಗಿತ್ತು. ಇದು, ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಅಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕರೊಬ್ಬರು ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಿರುವ ಪದಾರ್ಥಗಳಲ್ಲಿ ಯಾವುದೇ ದೋಷಗಳು ಇಲ್ಲ. ನಿರ್ದಿಷ್ಟ ಭಾಗದಲ್ಲಿ ಬಿರುಕು ಕಾಣಿಸಿಕೊಳ್ಳುವುದಕ್ಕೆ ಅಲ್ಲಿ ಕೈಗೊಂಡಿದ್ದ ‘ಪಂಚಿಂಗ್‌’ ಕಾರ್ಯದಲ್ಲಿನ ವೈಫಲ್ಯವೇ ಕಾರಣ. ಗುಣಮಟ್ಟದ ಕಾಂಕ್ರೀಟ್‌ ಮಿಶ್ರಣ ಹಾಕುವ ಮೂಲಕ ಇದನ್ನು ಸರಿಪಡಿಸಬಹುದು ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈಜೆಪುರ ಮೇಲ್ಸೇತುವೆಯಲ್ಲಿ ಅಳವಡಿಸಲಾಗಿದ್ದ ಸೆಗ್‌ಮೆಂಟ್‌ನಲ್ಲಿ ಬಿರುಕು ಕಾಣಸಿಕೊಂಡ ಬಗ್ಗೆ ಪರೀಕ್ಷೆ ನಡೆಸಿರುವ ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜೆ.ಎಂ.ಚಂದ್ರ ಕಿಶನ್ ಅವರು ‘ಎಲ್ಲ ರೀತಿಯ ಪರೀಕ್ಷೆಗಳನ್ನು ಕೈಗೊಂಡೇ ಸೆಗ್‌ಮೆಂಟ್‌ಗಳನ್ನು ಅಳವಡಿಸಬೇಕು. ಹಾನಿಗೊಳಗಾದ ಕಾಂಕ್ರೀಟ್ ಅನ್ನು ತೆಗೆದುಹಾಕುವ ಮೂಲಕ ತಕ್ಷಣದ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ADVERTISEMENT

ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್, ‘ಬಿರುಕು ಬಿಟ್ಟಿರುವುದು ದೊಡ್ಡ ಸಮಸ್ಯೆಯಲ್ಲ. ಗೊಂದಲಗಳು ನಿವಾರಣೆಯಾಗಿದೆ. ಶೀಘ್ರದಲ್ಲೇ ಕೆಲಸ ಆರಂಭಿಸಲಾಗುವುದು’ ಎಂದರು.

ಈಜಿಪುರ ಮುಖ್ಯರಸ್ತೆಯಲ್ಲಿ 2.38 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಒಟ್ಟು 762 ಸೆಗ್ಮೆಂಟ್‌ ಕಾಸ್ಟಿಂಗ್‌ಗಳನ್ನು ಅವಳಡಿಸಬೇಕಿದ್ದು, 437 ಸೆಗ್ಮೆಂಟ್ ಕಾಸ್ಟಿಂಗ್ ಅಳವಡಿಸಲಾಗಿದೆ. 2026ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.