ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕಲ್ಯಾಣ ಮಂಟಪದಲ್ಲಿದ್ದ ಕೂಲರ್‌ನ ವೈರ್ ತಗುಲಿ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗವಿಪುರ ಗುಟ್ಟಹಳ್ಳಿ ನಿವಾಸಿ ಪ್ರದೀಪ್ ಮತ್ತು ದೀಪಾ ದಂಪತಿ ಪುತ್ರ ಶಿವಂ (5) ಮೃತಪಟ್ಟಿದ್ದಾನೆ.
ಬಸವೇಶ್ವರನಗರದಲ್ಲಿರುವ ಕಲ್ಯಾಣದ ಮಂಟಪದಲ್ಲಿ ಜೂನ್ 4ರಂದು ಆವಘಡ ಸಂಭವಿಸಿದೆ. ಮೃತ ಬಾಲಕನ ತಾಯಿ ದೀಪಾ ಅವರು ನೀಡಿದ ದೂರಿನ ಮೇರೆಗೆ ಹಾಲ್‌ನ ವ್ಯವಸ್ಥಾಪಕ ಸತೀಶ್, ಎಲೆಕ್ಟ್ರಿಷಿಯನ್ ಸಂತೋಷ್ ಹಾಗೂ ಮಾಲೀಕ ದಿವಾಕರ್ ವಿರುದ್ಧ ಬಸವೇಶ್ವರನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.