ADVERTISEMENT

ವಿದ್ಯುತ್ ದರ ಏರಿಕೆಗೆ ಆಮ್‌ ಆದ್ಮಿ ಪಕ್ಷ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:30 IST
Last Updated 13 ಫೆಬ್ರುವರಿ 2021, 19:30 IST
ಎಎಪಿ
ಎಎಪಿ   

ಬೆಂಗಳೂರು: ಮುಂದಿನ ಏಪ್ರಿಲ್‌ನಿಂದ ಪ್ರತಿ ಯುನಿಟ್‌ ವಿದ್ಯುತ್‌ಗೆ ₹1.39 (ಶೇ 22) ಹೆಚ್ಚಳ ಮಾಡಲು ಮತ್ತೆ ಪ್ರಸ್ತಾವ ಸಲ್ಲಿಸಿರುವ ಬೆಸ್ಕಾಂ ನಡೆಗೆ ಆಮ್‌ ಆದ್ಮಿ ಪಕ್ಷ ವಿರೋಧ ವ್ಯಕ್ತಪಡಿಸಿದೆ.

‘2020-21ರ ಅವಧಿಯಲ್ಲಿ ₹ 5,872 ಕೋಟಿ ಆದಾಯದ ಕೊರ ತೆಯನ್ನು ಬೆಸ್ಕಾಂ ತೋರಿಸಿದೆ. ಕಳೆದ ವರ್ಷದ ವಿದ್ಯುತ್ ದರ ಹೆಚ್ಚಳ ಹಾಗೂ ಈಗ ಪ್ರಸ್ತಾಪಿಸಿರುವ ಬೆಲೆ ಏರಿಕೆಯನ್ನು ಸೇರಿಸಿದರೆ ಒಟ್ಟು ಪ್ರತಿ ಯುನಿಟ್‌ಗೆ ₹1.79 (ಶೇ 26) ಹೆಚ್ಚಳವಾಗುತ್ತದೆ. ಈ ರೀತಿ ಜನರನ್ನು ಸುಲಿಗೆ ಮಾಡಿ ಅದಾನಿ ಜೇಬು ತುಂಬಿಸಲು ಸರ್ಕಾರ ಹೊರಟಂತಿದೆ’ ಎಂದು ಪಕ್ಷದ ನೀತಿ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಡಿ ದೂರಿದರು.

‘ಕಳೆದ ನವೆಂಬರ್‌ನಲ್ಲಷ್ಟೇ ಪ್ರತಿ ಯುನಿಟ್‌ಗೆ 40 ಪೈಸೆ ಹೆಚ್ಚಿಸಿದ್ದ ಬೆಸ್ಕಾಂ ಈಗ ಮತ್ತೆ ಪ್ರಸ್ತಾವ ಸಲ್ಲಿಸಿದೆ. ಇನ್ನೊಂದಡೆ, 2020 ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಉಡುಪಿಯ ಅದಾನಿ ಪವರ್ ತನ್ನ ಲಾಭವನ್ನು 100 ಪಟ್ಟು ಹೆಚ್ಚಿಸಿಕೊಂಡಿದೆ. ವಿದ್ಯುತ್ ಸಚಿವಾಲಯವು ಅದಾನಿಯಿಂದ ಹೆಚ್ಚುವರಿಯಾಗಿ 1,800 ಮೆಗಾವಾಟ್ ವಿದ್ಯುತ್‌ ಖರೀದಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಪ್ರತಿ ವರ್ಷ ₹364 ಕೋಟಿ ವೆಚ್ಚವಾಗಲಿದೆ. ಈ ಹೊರೆಯನ್ನು ಬಡ ಜನರ ಮೇಲೆ ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.