ADVERTISEMENT

ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಓಡಾಟ ಬಂದ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 19:48 IST
Last Updated 17 ಡಿಸೆಂಬರ್ 2018, 19:48 IST

ಬೆಂಗಳೂರು: ರಸ್ತೆ ನಿರ್ವಹಣೆ ಹಾಗೂ ಜಾಯಿಂಟ್ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ಸೋಮವಾರ (ಡಿ.17) ಮಧ್ಯರಾತ್ರಿಯಿಂದ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

‘ದ್ವಿಚಕ್ರ ವಾಹನ, ಕಾರು, ಟಿ.ಟಿ ಸೇರಿ ಲಘು ವಾಹನಗಳು ಸಂಚಾರ ನಡೆಸಬಹುದು.ಸರ್ಕಾರಿ, ಖಾಸಗಿ ಬಸ್‍ಗಳು ಸೇರಿದಂತೆ ಎಲ್ಲಾ ವಿಧದ ಭಾರೀ ವಾಹನಗಳು ಕಾಮಗಾರಿ ಪೂರ್ಣಗೊಳ್ಳುವರೆಗೂ ಮೇಲ್ಸೇತುವೆ ಬಳಸುವಂತಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‍ಎಚ್‍ಐಎ) ನಿರ್ದೇಶನದ ಅನುಸಾರ 2019ರ ಮಾರ್ಚ್ 15ರ ಒಳಗೆ ಜಾಯಿಂಟ್‍ಗಳ ನಿರ್ವಹಣೆ ಕೆಲಸ ಪೂರ್ಣಗೊಳಿಸಬೇಕಿದೆ. ಹೀಗಾಗಿ, ಮೇಲ್ಸೇತುವೆಯಲ್ಲಿ ಒಂದು ಪಥವನ್ನು ಸಂಪೂರ್ಣ ಬಂದ್ ಮಾಡಿ ಕಾಮಗಾರಿ ನಡೆಸಲಾಗುತ್ತದೆ’ ಎಂದು ವಿವರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.