ADVERTISEMENT

ಈಶ್ವರ ಖಂಡ್ರೆಗೆ ₹ 5 ಲಕ್ಷ ದಂಡ

ವಿಚಾರಣೆಗೆ ಪದೇ ಪದೇ ಗೈರಿಗೆ ಹೈಕೋರ್ಟ್‌ ಕ್ರಮ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 3:09 IST
Last Updated 20 ನವೆಂಬರ್ 2020, 3:09 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ಚುನಾವಣಾ ತಕರಾರು ಅರ್ಜಿಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌, ನೋಟಿಸ್‌ ಜಾರಿ ಮಾಡಿದ್ದರೂ ನಿರಂತರವಾಗಿ ಗೈರಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಹೈಕೋರ್ಟ್‌ ₹ 5 ಲಕ್ಷ ದಂಡ ವಿಧಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅಕ್ರಮ ಎಸಗಿ ಜಯ ಗಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಕೆ. ಸಿದ್ರಾಮ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಖಂಡ್ರೆ ನಿರಂತರವಾಗಿ ವಿಚಾರಣೆಗೆ ಗೈರಾಗಿದ್ದರು. ಅವರಿಗೆ ₹ 5 ಲಕ್ಷ ದಂಡ ವಿಧಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠ, ಈ ಮೊತ್ತವನ್ನು ಕೋವಿಡ್‌–19 ಆರೈಕೆ ನಿಧಿಗೆ ಪಾವತಿಸುವಂತೆ ಆದೇಶಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

2018ರಿಂದಲೂ ವಿಚಾರಣೆ ನಡೆ ಯುತ್ತಿದೆ. ಆರಂಭದಲ್ಲಿ ಒಂದು ವರ್ಷ ಖಂಡ್ರೆ ವಿಚಾರಣೆಗೆ ಹಾಜರಾಗಿರಲಿಲ್ಲ. 2019ರಲ್ಲಿ ಅವರನ್ನು ವಿಚಾರಣೆಯಿಂದ ಕೈಬಿಟ್ಟು ಆದೇಶ ಹೊರಡಿಸಲಾಗಿತ್ತು. ಇತ್ತೀಚೆಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅವರು, ಆಪ್ತ ಸಹಾಯಕರು ಮರೆವಿನ ಕಾಯಿಲೆ ಹೊಂದಿದ್ದು, ನ್ಯಾಯಾಲಯದ ವಿಚಾರಣೆಯ ವಿಷಯವನ್ನು ತಮಗೆ ತಿಳಿಸಿರಲಿಲ್ಲ ಎಂದು ಕಾರಣ ನೀಡಿದ್ದರು.

ಖಂಡ್ರೆ ಅವರಿಗೆ ₹ 5 ಲಕ್ಷ ದಂಡ ವಿಧಿಸಿರುವ ನ್ಯಾಯಾಲಯ, ಮುಂದೆ ಸಕಾರಣವಿಲ್ಲದೇ ವಿಚಾರಣೆಮುಂದೂಡುವಂತೆ ಅರ್ಜಿ ಸಲ್ಲಿಸಬಾರದು ಎಂಬ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.