ಬೆಂಗಳೂರು: ಸದಾತನ ಸಂಸ್ಥೆಯು ಶಾಲಾ ಶಿಕ್ಷಕರಿಗಾಗಿ ನಡೆಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದು, ಕನಕಪುರದ ವಾಸುದೇವ್ ನಾಡಿಗ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ 964 ಶಿಕ್ಷಕರು ಭಾಗವಹಿಸಿದ್ದರು. ಬೆಳಗಾವಿಯ ಗಂಗಾದೇವಿ ಚಕ್ರಸಾಲಿ ದ್ವಿತೀಯ ಬಹುಮಾನ ಹಾಗೂ ಮಾಗಡಿಯ ಶ್ರುತಿ ವಿ.ಡಿ. ತೃತೀಯ ಬಹುಮಾನಕ್ಕೆ ಭಾಜನರಾಗಿದ್ದಾರೆ. ಈ ಬಹುಮಾನಗಳು ಕ್ರಮವಾಗಿ ₹ 21 ಸಾವಿರ, ₹ 18 ಸಾವಿರ ಹಾಗೂ ₹ 15 ಸಾವಿರ ನಗದು ಒಳಗೊಂಡಿವೆ.
ಕೊಪ್ಪದ ಕಾರ್ತಿಕ್ ವಾಗ್ಳೆ, ಬೈಂದೂರಿನ ರಾಮ ದೇವಾಡಿಗ, ತೀರ್ಥಹಳ್ಳಿಯ ಪ್ರಶಾಂತಿ ಪಾಟೀಲ, ಬೆಂಗಳೂರಿನ ಸುಪ್ರಿಯಾ ನಾರಾಯಣರಾವ್, ಸಿದ್ದಾಪುರದ ಸೀಮಾ ಮಡಿವಾಳ, ಹೊಸಪೇಟೆಯ ಕುರುಬರ ನಾರಾಯಣಮ್ಮ, ವಿಜಯಪುರದ ಸುಮಿತ್ರಾ ಗಾಜರೆ, ಬೆಂಗಳೂರಿನ ಉಮೇಶ್ ಕುಮಾರ್ ಎನ್., ಘಟಪ್ರಭಾದ ಅನ್ನಪೂರ್ಣ ಕಾಂಬಳೆ ಹಾಗೂ ಸಾಗರದ ಶಂಕರ್ ಜಿ.ಕೆ. ಅವರು ಮೆಚ್ಚುಗೆ ಬಹುಮಾನಕ್ಕೆ ಭಾಜನರಾಗಿದ್ದಾರೆ. ಈ ಬಹುಮಾನವು ತಲಾ ₹ 10 ಸಾವಿರ ನಗದು ಒಳಗೊಂಡಿದೆ.
ಇದೇ 9ರಂದು ಜಯನಗರದ ಜಯರಾಮಸೇವಾ ಮಂಡಳಿಯಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ಈ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಟ್ರಸ್ಟಿ ಕೆ.ಎಸ್. ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.