ADVERTISEMENT

ಪೌರಕಾರ್ಮಿಕರಿಗೆ ಪ್ರತಿ ತಿಂಗಳು ವೇತನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 21:51 IST
Last Updated 31 ಡಿಸೆಂಬರ್ 2022, 21:51 IST
   

ಬೆಂಗಳೂರು: ಪೌರಕಾರ್ಮಿಕರು, ಗುತ್ತಿಗೆ ನೌಕರರು ಸೇರಿದಂತೆ 12 ವರ್ಗದ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಅಥವಾ ಬಿಲ್‌ ಪಾವತಿ ಮಾಡಿದ ಮೇಲೆಯೇ ‘ಎ’ ವರ್ಗದ ಸಿಬ್ಬಂದಿಗೆ ವೇತನ ಪಾವತಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಪಾಲಿಕೆಯ ಗ್ರೂಪ್ ‘ಬಿ’, ‘ಸಿ’, ‘ಡಿ’ ನೌಕರರು, ಡಿ.ಪಿ.ಎಸ್ ಪೌರ ಕಾರ್ಮಿಕರು, ಸಿ ಆ್ಯಂಡ್‌ ಟಿ ತ್ಯಾಜ್ಯ ವೆಚ್ಚ, ಘನತ್ಯಾಜ್ಯ ನಿರ್ವಹಣೆಯ ಟಿಪ್ಪಿಂಗ್ ಶುಲ್ಕ, ಸಾರ್ವಜನಿಕ ಶೌಚಾ ಲಯ ನಿರ್ವಹಣೆ ಮತ್ತು ಬೀದಿ ದೀಪಗಳ ನಿರ್ವಹಣೆಯ ಬಿಲ್‌, ಉದ್ಯಾನ ನಿರ್ವಹಣೆಯ ಬಿಲ್‌, ಕೆರೆ ನಿರ್ವಹಣೆ ಬಿಲ್‌, ಮರ ಸವರುವಿಕೆಯ ಬಿಲ್‌, ಕಸಗುಡಿಸುವಿಕೆ ಯಂತ್ರಗಳ ಬಿಲ್‌, ಗ್ರೂಪ್‌ ‘ಎ’ ಅಧಿಕಾರಿಗಳ ವೇತನ, ಮಾರ್ಷಲ್ಸ್ ಮತ್ತು ಹೋಮ್ ಗಾರ್ಡ್ಸ್‌ ವೇತನ, ಇತರೆ ಎಲ್ಲಾ ಹೊರಗುತ್ತಿಗೆ ನೌಕರರ ವೇತನ ಪಾವತಿ ಆಯಾ ತಿಂಗಳೇ ಆಗಲಿದೆ ಎಂದರು.

‘ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸ ಬೇಕಾದರೆ, ಆ ಹಂತದಲ್ಲಿ ಕೆಲಸ ನಿರ್ವಹಿಸುವವರಿಗೆ ಮೊದಲು ವೇತನ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, ವೇತನ ಬಾಕಿ ಉಳಿಸಿ ಕೊಳ್ಳುವುದಿಲ್ಲ. ಮುಖ್ಯ ಆಯುಕ್ತರ ಅನುಮತಿಗಾಗಿ ಕಡತ ಕಳುಹಿಸದೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಣ ಬಿಡುಗಡೆ ಮಾಡಲಿದ್ದಾರೆ.‌ ಶೇ 100ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡುವ ಉದ್ದೇಶದಿಂದ ವಿಶೇಷ ಆಯುಕ್ತರು, ವಲಯ ಆಯುಕ್ತರಿಗೆ ತಲಾ 10 ದೊಡ್ಡ ತೆರಿಗೆ ಪಾವತಿ ಬಾಕಿಯನ್ನು ವಸೂಲಿ ಮಾಡುವ ಜವಾಬ್ದಾರಿ ನೀಡಲಾಗಿದೆ’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.