ADVERTISEMENT

ಚಿತ್ರಕಲಾ ಪರಿಷತ್‌ನಿಂದ ‘ಪರಿಸರ ಮನನ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 20:02 IST
Last Updated 1 ಜೂನ್ 2022, 20:02 IST

ಬೆಂಗಳೂರು: ಪರಿಸರದ ಮೇಲಿನ ಮಾನವನ ಹಸ್ತಕ್ಷೇಪ ತಡೆ ಮತ್ತು ಮಾಲಿನ್ಯ ನಿಯಂತ್ರಣ ಕುರಿತು ನಗರದ ಪದವಿ ಕಾಲೇಜುಗಳ ಭಾಷಾ ವಿಷಯಗಳ ಬೋಧಕರಿಗೆ ಚಿತ್ರಕಲಾ ಪರಿಷತ್‌ ಜೂನ್‌ 9 ಮತ್ತು ಜೂನ್‌ 17ರಂದು ತಲಾ ಮೂರು ದಿನಗಳ ‘ಪರಿಸರ ಮನನ–2022’ ಕಾರ್ಯಾಗಾರ ಹಮ್ಮಿಕೊಂಡಿದೆ.

‘ಜಾಗತಿಕ ಪರಿಸರ ದಿನ, ಸಾಗರ ದಿನ ಮತ್ತು ಮರುಭೂಮಿ ನಿರೋಧಕ ದಿನಗಳಿಗೆ ಪೂರಕವಾಗಿ ಈ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆ ತಡೆ, ನವೀಕರಿಸಬಹುದಾದ ಇಂಧನಗಳ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಪರಿಸರ ನಾಯಕತ್ವ ತರಬೇತಿಯನ್ನೂ ಒದಗಿಸಲಾಗುವುದು’ ಎಂದು ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ತಿಳಿಸಿದ್ದಾರೆ.

ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಬೋಧಕರು ಇದೇ 6ರೊಳಗೆ parisara2022@gmail.com ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ
ಮೊಬೈಲ್‌ ಸಂಖ್ಯೆ 9448077019 ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.