ADVERTISEMENT

ಗಮನ ಬೇರೆಡೆ ಸೆಳೆಯಲು ವಿವಾದ ಸೃಷ್ಟಿ: ಎಚ್. ಆಂಜನೇಯ

ಕಾಂಗ್ರೆಸ್ ಮುಖಂಡ ಎಚ್. ಆಂಜನೇಯ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 19:53 IST
Last Updated 27 ಮಾರ್ಚ್ 2022, 19:53 IST
ಎಚ್. ಆಂಜನೇಯ
ಎಚ್. ಆಂಜನೇಯ   

ಬೆಂಗಳೂರು: ‘ತಾಯಂದಿರು, ಮಠಾಧೀಶರು, ವಿವಿಧ ಧರ್ಮದ ಜನರು ತಲೆ ಮೇಲೆ ಹಾಕುವ ಬಟ್ಟೆ (ದುಪ್ಪಟ್ಟಾ) ಗೌರವದ ಸೂಚಕ ಎಂದು ಸಿದ್ದರಾಮಯ್ಯ ಹೇಳಿದ್ದ ಮಾತನ್ನು ಬಿಜೆಪಿ ತಿರುಚುವ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಎಚ್. ಆಂಜನೇಯ ಆರೋಪಿಸಿದ್ದಾರೆ.

ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಹಿಜಾಬ್ ವಿಷಯವನ್ನು ಶಾಲೆಯ ಮುಖ್ಯ ಶಿಕ್ಷಕರ ಹಂತದಲ್ಲೇ ಬಗೆಹರಿಸಬೇಕಿತ್ತು. ಇದೇ ವಿಚಾರ ಮುಂದಿಟ್ಟುಕೊಂಡು ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಲಾಗಿದೆ. ನ್ಯಾಯಾಲಯದ ಸಮಯವನ್ನೂ ವ್ಯರ್ಥ ಮಾಡುವ ಮಟ್ಟಕ್ಕೆ ಬೆಳೆಸಲಾಗಿದೆ. ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರ ಮನಸ್ಸಿನಲ್ಲಿರುವ ವಿಷದ ನಂಜು ಕಾರಣ.ಈಗ ಹಿಜಾಬ್ ವಿವಾದ ತಣ್ಣಗಾಗುತ್ತಿದ್ದಂತೆಯೇ ಆತಂಕಕ್ಕೆ ಒಳಗಾಗಿರುವ ಬಿಜೆಪಿ ನಾಯಕರು, ಅದನ್ನು ಜೀವಂತವಾಗಿ ಇಡುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಸಿದ್ದರಾಮಯ್ಯ ಅವರು ಹೇಳಿದ ಮಾತನ್ನೇ ತಿರುಚುವ ಮೂಲಕ ನಾಡಿನ ಮಠಾಧೀಶರನ್ನು ಅಪಮಾನಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.