ADVERTISEMENT

‘ಅಂಗವಿಕಲರಿಗೆ ಸೌಲಭ್ಯ: ಲೋಪವಾದರೆ ಕಠಿಣ ಕ್ರಮ’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:00 IST
Last Updated 8 ಆಗಸ್ಟ್ 2019, 20:00 IST

ಬೆಂಗಳೂರು: ಅಂಗವಿಕಲರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಬದ್ಧವಾಗಿದೆ. ಲೋಪಗಳು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆಯ ನಿರ್ದೇಶಕ ಜಯವಿಭವ ಸ್ವಾಮಿ ಹೇಳಿದ್ದಾರೆ.

‘ಆಡಳಿತಕ್ಕೆ ಅಂಗವೈಕಲ್ಯ’ ಕುರಿತ ’ಒಳನೋಟ‘ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂಗವಿಕಲರಿಗೆ ಸೌಲಭ್ಯಗಳನ್ನು ತಲುಪಿಸಲು
ವಿಫಲವಾದ ಸಂಸ್ಥೆಗಳಿಂದ ಅನುದಾನ ವಸೂಲು ಮಾಡಿ, ಮುಖ್ಯಸ್ಥರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಹಾಲೇಖಪಾಲರ ವರದಿಯನ್ನು ಆಧರಿಸಿ ಅದರಲ್ಲಿ ಉಲ್ಲೇಖಿಸಿರುವ ಐದು ಪ್ರಕರಣಗಳಲ್ಲಿಯೂ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ದಂಡ ವಸೂಲಾತಿ ಮಾಡಿದ್ದು, ಈಗಾಗಲೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಯೋಜನೆಗಳನ್ನು ಆನ್‌ಲೈನ್‌ ಮೂಲಕವೇ ಫಲಾನುಭವಿಗಳಿಗೆ ತಲುಪಿಸಲು ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ನೀಡಲಾಗುತ್ತಿದೆ. ಇದು, ಪೂರ್ಣ ಜಾರಿಗೆ ಬಂದ ನಂತರ ಅಕ್ರಮಗಳಿಗೆ ಅವಕಾಶವಿರುವುದಿಲ್ಲ. ಈವರೆಗೂ ಯೋಜನೆಗೆ ಈ ವರ್ಷದ ಮಾರ್ಚ್‌ನಿಂದ 1.3 ಲಕ್ಷ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆರು ತಿಂಗಳಲ್ಲಿ ಈ ಕಾರ್ಯ ಮುಗಿಯಲಿದೆ’ ಎಂದು ಯುಡಿಐಡಿ ನೀಡುವ ಕಾರ್ಯ ಮುಗಿಯಲಿದೆ’ ಎಂದಿದ್ದಾರೆ.

ಆಂಗವಿಕಲರಿಗೆ ಸೌಲಭ್ಯ ಕಲ್ಪಿಸುವ ಶಾಲೆಗಳಲ್ಲಿ ಮಾರ್ಗಸೂಚಿಯಂತೆ ಸವಲತ್ತು ಇಲ್ಲದಿರುವುದು ಕಂಡುಬಂದರೆ, ಅಂಥ ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುತ್ತಿದೆ. ಕಡ್ಡಾಯವಾಗಿ ಮೂಲಸೌಕರ್ಯ ಒದಗಿಸಲು ತಾಕೀತು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.