ADVERTISEMENT

ಬ್ಯಾಂಕ್‌, ಗ್ರಾಹಕರಿಗೆ ₹20 ಕೋಟಿಗೂ ಹೆಚ್ಚು ವಂಚನೆ: ‘ನಕಲಿ ಬಿಲ್ಡರ್‌’ಗಳ ಸೆರೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:34 IST
Last Updated 9 ಜನವರಿ 2020, 19:34 IST
ರಂಗನಾಥ್‌
ರಂಗನಾಥ್‌   

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಯಾವುದೋ ಅಪಾರ್ಟ್‌ಮೆಂಟ್‌ ಸಮುಚ್ಚಯ ತೋರಿಸಿ ‘ಅದು ನಮ್ಮದೇ, ನಾವೇ ಬಿಲ್ಡರ್ಸ್’ ಎಂದು ಹೇಳಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಿಂದ ಕೋಟ್ಯಂತರ ಹಣ ಸಾಲ ಪಡೆದು ವಂಚಿಸಿದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿರುವ, ಬಸವೇಶ್ವರ ನಗರದ ಮಂಜುನಾಥ್ (34) ಮತ್ತು ಕೆಂಗೇರಿಯ ದೊಡ್ಡಬೆಲೆ ನಿವಾಸಿ ರಂಗನಾಥ್ (37) ಬಂಧಿತರು.

ಬ್ಯಾಂಕ್‌ ಮತ್ತು ಗ್ರಾಹಕರಿಗೆ ಆರೋಪಿಗಳು ₹ 20 ಕೋಟಿ ವಂಚಿಸಿ ರುವ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸಾಲದ ಹಣದಲ್ಲಿ 'ಆಡಿ' ಕಾರು, ‘ಜೀಪ್’ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ ಈ ಇಬ್ಬರ ಬಗ್ಗೆ ಮಾಹಿತಿ ಸಂಗ್ರಹಿಸಿ, ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ನಗರ ಮತ್ತು ಹೊರವಲಯದಲ್ಲಿ ಅಪಾರ್ಟ್‌ಮೆಂಟ್‌ ಕಟ್ಟುವ ನೆಪ ದಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸುತ್ತಿ ರುವುದಾಗಿ ಆರೋಪಿಗಳು, ಮೊದಲು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿ ದ್ದರು. ನಂತರ ಬ್ಯಾಂಕ್‌ಗಳಿಗೆ ಮಾತ್ರವಲ್ಲದೆ, ಯಾವುದೋ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗ್ರಾಹಕರಿಗೂ ತೋರಿಸಿ, ತಾವೇ ಕಟ್ಟಡ ಮಾಲೀಕರು ಎಂದು ನಂಬಿಸುತ್ತಿದ್ದರು. ಬಲೆಗೆ ಬಿದ್ದ ಗ್ರಾಹಕರಿಂದ ಕೆ.ವೈ. ಸಿ ದಾಖಲಾತಿಗಳನ್ನು ಪಡೆಯುತ್ತಿದ್ದರು. ಬಿಲ್ಡರ್‌ಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಗ್ರಾಹಕರ ಹೆಸರಿನಲ್ಲಿ ಪಡೆದ ಬ್ಯಾಂಕ್‌ ಸಾಲದ ಹಣವನ್ನು ಅವರಿಬ್ಬರೂ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡು ತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಸಿಸಿಬಿ ಪೊಲೀಸರು ಆರೋಪಿಗಳ ಹುಡುಕಾಟ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.