ADVERTISEMENT

512 ಖೋಟಾ ನೋಟುಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:54 IST
Last Updated 16 ಡಿಸೆಂಬರ್ 2019, 19:54 IST

ಬೆಂಗಳೂರು: ಹಾಸನದಲ್ಲಿರುವ ಕಾರ್ಪೊರೇಷನ್‌ ಬ್ಯಾಂಕಿನ ಕರೆನ್ಸಿ ಚೆಸ್ಟ್‌ ಸೇರಿ 31 ಕರೆನ್ಸಿ ಚೆಸ್ಟ್‌
ಗಳಿಂದ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಕಚೇರಿಗೆ ಬಂದ ಹಣದಲ್ಲಿ ₹ 100ರ ಮುಖಬೆಲೆಯ 512 ಖೋಟಾ ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಆರ್‌ಬಿಐ ಎಜಿಎಂ ಮಹೇಶ್ ಅವರು ಹಲಸೂರು ಗೇಟ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ 32 ಕರೆನ್ಸಿ ಚೆಸ್ಟ್‌ ಶಾಖೆಗಳ ಮ್ಯಾನೇಜರ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.