
ಬೆಂಗಳೂರು: ನಗರದ ಸಿಎಆರ್(ಉತ್ತರ) ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತು ವೇಳೆ ‘ಹೊಯ್ಸಳ ತಂಡ’ಕ್ಕೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಪ್ರಶಂಸನಾ ಪತ್ರ ವಿತರಣೆ ಮಾಡಿದರು.
‘ಸಹಾಯವಾಣಿ 112’ಕ್ಕೆ ಕರೆ ಮಾಡಿದವರಿಂದ ಸ್ವೀಕರಿಸಿದ ಪ್ರತಿಕ್ರಿಯೆ ಹಾಗೂ ರೇಟಿಂಗ್ ಆಧರಿಸಿ, ಕಳೆದ ತಿಂಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ ವಿವಿಧ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಯಿತು.
ಪೂರ್ವ ವಿಭಾಗ: ಚೈತನ್ಯ ಸಿ.ಜೆ. ಹಾಗೂ ಕೆ.ಅಶೋಕ್, ಪೊಲೀಸ್ ಕಾನ್‌ಸ್ಟೆಬಲ್, ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆ. ಈಶ್ವರ ಹಾನಗಲ್, ಪೊಲೀಸ್ ಕಾನ್‌ಸ್ಟೆಬಲ್, ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆ. ನಾಗೇಂದ್ರ, ಹೆಡ್ ಕಾನ್‌ಸ್ಟೆಬಲ್, ಎಚ್‌ಎಎಲ್ ಸಂಚಾರ ಪೊಲೀಸ್ ಠಾಣೆ.
ಪಶ್ಚಿಮ ವಿಭಾಗ: ನಟರಾಜ್ ಎಂ.ಆರ್., ಇನ್‌ಸ್ಟೆಕ್ಟರ್, ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆ. ಗವಿಯಪ್ಪ, ಹೆಡ್ ಕಾನ್‌ಸ್ಟೆಬಲ್, ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ. ಎಸ್.ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ. ಲೋಕೇಶ್ (ಎಎಸ್ಐ) ಮತ್ತು ಸಿಬ್ಬಂದಿ, ಸದಾಶಿವನಗರ ಸಂಚಾರ ಪೊಲೀಸ್ ಠಾಣೆ. ರಾಮಚಂದ್ರ (ಎಎಸ್‌ಐ) ಹಾಗೂ ಸಿಬ್ಬಂದಿ, ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆ.
ಉತ್ತರ ವಿಭಾಗ: ಮಲ್ಲಪ್ಪ, ಪೊಲೀಸ್ ಕಾನ್‌ಸ್ಟೆಬಲ್, ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆ. ಎಂ.ರಾಜೇಂದ್ರ, ಹೆಡ್ ಕಾನ್‌ಸ್ಟೆಬಲ್, ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ.
ದಕ್ಷಿಣ ವಿಭಾಗ: ಸಿ.ಕೆ.ಸುರೇಶ್, ಹೆಡ್ ಕಾನ್‌ಸ್ಟೆಬಲ್, ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ. ಎಲ್.ಟಿ.ಸಲೀಂ, ಹೆಡ್ ಕಾನ್‌ಸ್ಟೆಬಲ್, ಹುಳಿಮಾವು ಸಂಚಾರ ಪೊಲೀಸ್ ಠಾಣೆ. ಶರಣಬಸವ, ಹೆಡ್‌ಕಾನ್‌ಸ್ಟೆಬಲ್, ವಿವಿ ಪುರಂ ಸಂಚಾರ ಪೊಲೀಸ್ ಠಾಣೆ.
ಕವಾಯತು ವೇಳೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಗೌರವ ವಂದನೆ ಸ್ವೀಕರಿಸಿದರು. ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ನೇತೃತ್ವದಲ್ಲಿ ನಡೆದ ಕವಾಯತಿನಲ್ಲಿ ವಿವಿಧ ಘಟಕಗಳ 10 ತುಕಡಿಗಳು ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.