
ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ (ಕೆಪಿಎಂಇ) ನಿಯಮಗಳ ಉಲ್ಲಂಘನೆ ಕಾರಣ ಆಸ್ಪತ್ರೆಗಳು ಸೇರಿ 28 ವೈದ್ಯಕೀಯ ಸಂಸ್ಥೆಗಳಿಗೆ ಒಟ್ಟು ₹9.35 ಲಕ್ಷ ದಂಡ ವಿಧಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯನ್ನು ಅವರು ನಗರದಲ್ಲಿ ಶುಕ್ರವಾರ ನಡೆಸಿದರು. ಕೆಪಿಎಂಇ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು 65 ಪ್ರಕರಣಗಳ ಬಗ್ಗೆ ವಿವರ ಸಲ್ಲಿಸಿದ್ದರು. ಇವುಗಳಲ್ಲಿ ಬ್ಯಾಟರಾಯನಪುರದ ಆರ್‌ಎಂಎಸ್ ಲೇಔಟ್‌ನಲ್ಲಿರುವ ಆಸ್ತಾ ಡಯಾಗ್ನಾಸ್ಟಿಕ್ ಸೆಂಟರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ನಾಲ್ಕು ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ವರ್ಗಾಯಿಸಲಾಗಿದೆ. ಇನ್ನೂ ನಾಲ್ಕು ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಲು ಆದೇಶಿಸಿದ್ದಾರೆ.
ದಂಡ ವಿಧಿಸಲ್ಪಟ್ಟ ಸಂಸ್ಥೆಗಳು: ಕೊಡಿಗೆಹಳ್ಳಿಯ ಮಂಗಳ ಮಲ್ಟಿಸ್ಪೇಷಾಲಿಟಿ ಕ್ಲಿನಿಕ್, ಕೆ.ಆರ್.ಪುರದ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ವಿಶ್ವ ಹೆಲ್ತ್‌ಕೇರ್ ಸೆಂಟರ್, ರಾಜಾಜಿನಗರದ ಅಂಚೆಕಚೇರಿ ಮುಂಭಾಗ ಇರುವ ಆಯುಷ್ ಹೆಲ್ತ್ ಸೆಂಟರ್, ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಲೈಫ್ ಕೇರ್ ಹೋಮಿಯೊ ಫಾರ್ಮಾ, ಸೌಂದರ್ಯ ಲೇಔಟ್‌ನಲ್ಲಿ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಇಬ್ಬನಿ ಸಿಲ್ಜು ಕಾಸ್ಮೆಟಾಲಜಿ, ಕೆ.ಆರ್.ಪುರದ ಗಾಯತ್ರಿ ಲೇಔಟ್‌ನಲ್ಲಿರುವ ಶಂಕರ್ ಕ್ಲಿನಿಕ್, ಲಿಂಗದಿರನಹಳ್ಳಿಯ ನಾಲ್ಕನೇ ಬ್ಲಾಕ್‌ನಲ್ಲಿರುವ ಎಸ್ಎಲ್‌ವಿ ಕ್ಲಿನಿಕ್, ವಸಂತನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆ ಹಾಗೂ ಮಹದೇವಪುರದ ನಾರಾಯಣಪುರ ಮುಖ್ಯರಸ್ತೆಯಲ್ಲಿರುವ ಆರ್ಥೋಸ್ಕ್ವೇರ್ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್‌ಗೆ ತಲಾ ₹ 50 ಸಾವಿರ ದಂಡ ವಿಧಿಸಲಾಗಿದೆ.
ಉಲ್ಲಾಳು ಮುಖ್ಯರಸ್ತೆಯಲ್ಲಿರುವ ನಿಹಾಸ್ವಿ ಪಾಲಿ ಕ್ಲಿನಿಕ್ ಆ್ಯಂಡ್ ಮೆಡಿಕಲ್, ದೊಡ್ಡಬ್ಯಾಲಕೆರೆ ಗ್ರಾಮದಲ್ಲಿರುವ ಸಾಯಿರಾಂ ಕ್ಲಿನಿಕ್, ಮಾಗಡಿ ಮುಖ್ಯರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ವಾಸು ಕ್ಲಿನಿಕ್, ಕಮ್ಮನಹಳ್ಳಿಯಲ್ಲಿರುವ ಆರ್.ಕೆ. ಆಸ್ಪತ್ರೆ, ಚನ್ನೇನಹಳ್ಳಿಯಲ್ಲಿರುವ ಶರಣು ಕ್ಲಿನಿಕ್, ಲಗ್ಗೆರೆಯಲ್ಲಿರುವ ಮಾರುತಿ ಕ್ಲಿನಿಕ್, ಸಹಕಾರ ನಗರದಲ್ಲಿರುವ ಸುಖಿಭವ ಕ್ಲಿನಿಕ್, ಹುರಳಿ ಚಿಕ್ಕನಹಳ್ಳಿಯಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಪಾಲಿ ಕ್ಲಿನಿಕ್, ಹೆಗ್ಗನಹಳ್ಳಿ ಕ್ರಾಸ್ ಮುಖ್ಯರಸ್ತೆಯಲ್ಲಿರುವ ಸಿದ್ಧಿ ವಿನಾಯಕ ಕ್ಲಿನಿಕ್, ಯಲಹಂಕದ ಅಟ್ಟೂರು ಮುಖ್ಯರಸ್ತೆಯಲ್ಲಿರುವ ಪಬ್ಲಿಕ್ ಹೆಲ್ತ್ ಡಯಾಗ್ನಾಸ್ಟಿಕ್ಸ್‌ಗೆ ತಲಾ ₹ 25 ಸಾವಿರ ದಂಡ ಹಾಕಲಾಗಿದೆ.
ಮಾದನಾಯಕನಹಳ್ಳಿಯಲ್ಲಿರುವ ಪಬ್ಲಿಕ್ಸ್ ಹೆಲ್ತ್‌ಕೇರ್, ಮೈಸೂರು ರಸ್ತೆಯ ವೈಷ್ಣವಿ ನಗರದಲ್ಲಿರುವ ರಿಕವರಿಂಗ್ ಕ್ಯಾಟ್ಸ್, ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಉಷಾ ಆಸ್ಪತ್ರೆ, ಅಂದ್ರಳ್ಳಿಯ ಎಬಿಎನ್ ಕನ್ವೆನ್ಷನ್ ಹಾಲ್ ಎದುರು ಇರುವ ಎಸ್ಎಸ್ಎಂ ಆಸ್ಪತ್ರೆ, ಯಲಹಂಕದಲ್ಲಿರುವ ಎನ್‌ಡಿಆರ್ ಆಸ್ಪತ್ರೆ ಹಾಗೂ ವಿದ್ಯಾರಣ್ಯಪುರದಲ್ಲಿರುವ ಡಾ.ರೆಡ್ಡಿ ಪಾಲಿಕ್ಲಿನಿಕ್‌ಗೆ ತಲಾ ₹ 25 ಸಾವಿರ ದಂಡ ವಿಧಿಸಲಾಗಿದೆ.
ಸುಂಕದಕಟ್ಟೆಯಲ್ಲಿರುವ ಗೋಲ್ಡನ್ ಲೈಫ್ ಟ್ರಸ್ಟ್‌ಗೆ ಕೆಪಿಎಂಇ ನಿಯಮಗಳ ಉಲ್ಲಂಘನೆ ಕಾರಣ ₹10 ಸಾವಿರ ದಂಡ ಹಾಕಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.