ADVERTISEMENT

ಬೆಂಗಳೂರು | ಆಟೊದಲ್ಲಿ ವ್ಹೀಲಿ: ಚಾಲಕನ ವಿರುದ್ಧ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 16:04 IST
Last Updated 5 ಮಾರ್ಚ್ 2025, 16:04 IST
ವ್ಹೀಲಿ ನಡೆಸಿದ್ದ ಆಟೊವನ್ನು ಕೆಆರ್‌ ಪುರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ 
ವ್ಹೀಲಿ ನಡೆಸಿದ್ದ ಆಟೊವನ್ನು ಕೆಆರ್‌ ಪುರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ    

ಬೆಂಗಳೂರು: ಕೆ.ಆರ್‌ ಪುರದ ಸೇತುವೆ ಮೇಲೆ ಆಟೊದಲ್ಲಿ ವ್ಹೀಲಿ ನಡೆಸಿದ್ದ ಚಾಲಕನ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ, ಆಟೊವನ್ನೂ ಜಪ್ತಿ ಮಾಡಿದ್ದಾರೆ.

ಆಟೊದಲ್ಲಿ ಚಾಲಕ ವ್ಹೀಲಿ ನಡೆಸಿದ್ದ. ಆ ದೃಶ್ಯವನ್ನು ತನ್ನ ಸ್ನೇಹಿತರು ಚಿತ್ರೀಕರಿಸಿದ್ದರು. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಚಾಲಕನೇ ಹರಿಯಬಿಟ್ಟಿದ್ದ. ಅದನ್ನು ಗಮನಿಸಿದ್ದ ಕೆ.ಆರ್‌.ಪುರ ಸಂಚಾರ ಪೊಲೀಸರು ಚಾಲಕನನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಬೈಕ್‌ ಹಾಗೂ ಆಟೊಗಳಲ್ಲಿ ವ್ಹೀಲಿ ನಡೆಸುತ್ತಾ ಪುಂಡಾಟ ನಡೆಸುವವರ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಸಾಹಿಲ್‌ ಬಾಗ್ಲಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.