
ಸಿ.ಎಂ.ಇಬ್ರಾಹಿಂ
ಬೆಂಗಳೂರು: ಅತಿಕ್ರಮವಾಗಿ ಪ್ರವೇಶಿಸಿ, ನಿರ್ಮಾಣ ಹಂತದ ಕಟ್ಟಡ ತೆರವು ಪ್ರಕರಣದಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಉಮರ್ ನಗರದ ಮಹಮ್ಮದ್ ಇಮಾಮ್ ಸಾಹೇಬ್ ಅವರು ನೀಡಿದ ದೂರಿನ ಮೇರೆಗೆ ಸಿ.ಎಂ.ಇಬ್ರಾಹಿಂ ಹಾಗೂ ದಿ ಮ್ಯಾನೇಜ್‌ಮೆಂಟ್ ಆಫ್ ಎಚ್‌ಕೆಬಿಕೆ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ನಾಗವಾರದ ಸರ್ವೆ ನಂಬರ್ 23/3, 23/4ರಲ್ಲಿ ನಿವೇಶನ ಸಂಖ್ಯೆ 64, 65, 66ರಲ್ಲಿ ಸ್ವತ್ತನ್ನು ದೂರುದಾರರು ಖರೀದಿಸಿದ್ದರು. ತಮ್ಮ ಸ್ವಾಧೀನ ಅನುಭವದಲ್ಲಿ ಇಟ್ಟುಕೊಂಡಿದ್ದರು. ಮಹಮ್ಮದ್ ಇಮಾಮ್ ಸಾಹೇಬ್ ಅವರ ಸ್ವತ್ತಿಗೆ ಆರೋಪಿಗಳು ಅತಿಕ್ರಮ ಪ್ರವೇಶ ಮಾಡಿ, ನಿರ್ಮಾಣ ಹಂತದ ಕಟ್ಟಡವನ್ನು ಕೆಡವಿದ್ದರು’ ಎಂದು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.