ADVERTISEMENT

9 ವ್ಹೀಲಿ 'ವೀರರ' ವಿರುದ್ಧ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರಿಂದ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 15:46 IST
Last Updated 6 ಫೆಬ್ರುವರಿ 2026, 15:46 IST
<div class="paragraphs"><p>ಬೆಂಗಳೂರು ಪೊಲೀಸ್</p></div>

ಬೆಂಗಳೂರು ಪೊಲೀಸ್

   

ಬೆಂಗಳೂರು: ವ್ಹೀಲಿ ಮಾಡುವ ಯುವಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರು, 9 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

‘ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯ ಜಂಕ್ಷನ್‌, ಭಟ್ಟರಹಳ್ಳಿ ಜಂಕ್ಷನ್, ಹಳೆ ಮದ್ರಾಸ್ ರಸ್ತೆ ಹಾಗೂ ಮೇಡಹಳ್ಳಿ ಸೇತುವೆ ಬಳಿ ಸಿಬ್ಬಂದಿ ಗಸ್ತಿನಲ್ಲಿದ್ದಾಗ 9 ಯುವಕರು ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಬಂದು ವ್ಹೀಲಿ ನಡೆಸುತ್ತಿರುವುದು ಕಂಡುಬಂದಿತ್ತು. ತಕ್ಷಣವೇ ಎಲ್ಲ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ, ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ (ಸಂಚಾರ) ಸಾಹಿಲ್‌ ಬಾಗ್ಲಾ ತಿಳಿಸಿದ್ದಾರೆ.

ADVERTISEMENT

‘ಕೆಲವು ದಿನಗಳಿಂದ ವ್ಹೀಲಿ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಟಿ.ಸಿ ಪಾಳ್ಯದ ಸುತ್ತಮುತ್ತ ರಾತ್ರಿ ವೇಳೆ ವ್ಹೀಲಿ ನಡೆಸಲಾಗುತ್ತಿದೆ. ಅಂತಹವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.