ADVERTISEMENT

ಮೀನು ಕೃಷಿ; ಸಮಸ್ಯೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ: ಜಲಕೃಷಿ ತಜ್ಞ ಸಿ.ವಿ. ಮೋಹನ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:30 IST
Last Updated 13 ಜುಲೈ 2025, 0:30 IST
ಕಾರ್ಯಕ್ರಮದ ಅಂಗವಾಗಿ ಬಾರ್ಬೋಡ್ಸ್ ಕರ್ನಾಟಿಕಸ್ ಮತ್ತು  ಕೆಮ್ಮೀನಿನ ಮರಿಗಳನ್ನು ಹೆಸರಘಟ್ಟ ಕೆರೆಗೆ ಬಿಡಲಾಯಿತು
ಕಾರ್ಯಕ್ರಮದ ಅಂಗವಾಗಿ ಬಾರ್ಬೋಡ್ಸ್ ಕರ್ನಾಟಿಕಸ್ ಮತ್ತು  ಕೆಮ್ಮೀನಿನ ಮರಿಗಳನ್ನು ಹೆಸರಘಟ್ಟ ಕೆರೆಗೆ ಬಿಡಲಾಯಿತು   

ಹೆಸರಘಟ್ಟ: ‘ಮೀನು ಕೃಷಿಯಲ್ಲಿನ ಸಮಸ್ಯೆಗಳ ಕುರಿತು ವಿಜ್ಞಾನಿಗಳೊಂದಿಗೆ ಚರ್ಚಿಸಿದಾಗ, ಸೂಕ್ತ ಪರಿಹಾರಗಳು ಲಭ್ಯವಾಗುತ್ತವೆ’ ಎಂದು ಜಲಕೃಷಿ ತಜ್ಞ ಸಿ.ವಿ. ಮೋಹನ್ ತಿಳಿಸಿದರು.

ಇಲ್ಲಿನ ಐಸಿಎಆರ್‌– ಒಳನಾಡು ಮೀನುಗಾರಿಕೆ ಸಂಶೋಧನಾ ಕೇಂದ್ರ, ಸಿಫ್ರಿ–ಸಿಫಾ ಆವರಣದಲ್ಲಿ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀನು ಕೃಷಿಕರು ಮತ್ತು ವಿಜ್ಞಾನಿಗಳ ನಡುವೆ ನಿರಂತರ ಸಂವಹನ ನಡೆಯಬೇಕು. ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಅವರು ತಿಳಿಸಿದರು.

ADVERTISEMENT

‘ಮೀನು ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಶಿವಮೊಗ್ಗೆ ಕೆಳದಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಿ. ವಾಸುದೇವಪ್ಪ ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ನಾಡ ಮೀನು ಬಾರ್ಬೋಡ್ಸ್ ಕರ್ನಾಟಿಕಸ್ ಮತ್ತು ಕೆಮ್ಮೀನಿನ ಮರಿಗಳನ್ನು ಹೆಸರಘಟ್ಟ ಕೆರೆಗೆ ಬಿಡಲಾಯಿತು. ನಂತರ ಪ್ರಗತಿಪರ ಮೀನು ಕೃಷಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ್ ಟಿ.ಎಸ್, ಪ್ರಧಾನ ವಿಜ್ಞಾನಿಗಳಾದ ಎಲ್. ನರಸಿಂಹಮೂರ್ತಿ, ಗಂಗಾಧರ ಬಾರ್ಲಯ ಮತ್ತು ಮೀನು ಕೃಷಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.