ADVERTISEMENT

ರಾಷ್ಟ್ರಧ್ವಜಕ್ಕೆ ಅಗೌರವ: ಯುವಕರಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮೇ 2019, 19:56 IST
Last Updated 11 ಮೇ 2019, 19:56 IST

ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಡಿ ಯುವಕರಿಬ್ಬರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಜಾಫರ್ ಹಾಗೂ ರಾಬಿನ್ ಸೌದ್ ಬಂಧಿತರು.

‘ರಾಘವೇಂದ್ರ ಬಡಾವಣೆಯಲ್ಲಿರುವ ‘ಶ್ರೀನಿವಾಸ್ ರೆಸಿಡೆನ್ಸಿ ಜೋಲೊ ಸ್ಟೇ’ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಆರೋಪಿಗಳು ವಾಸವಿದ್ದರು. ಅದೇ ಕಟ್ಟಡದ ಟೆರಸ್‌ನಲ್ಲಿ ಪ್ಲಾಸ್ಟಿಕ್ ಪೈಪ್‌ಗೆ ರಾಷ್ಟ್ರಧ್ವಜ ಕಟ್ಟಿ ಅಗೌರವ ತೋರಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ರಾಷ್ಟ್ರಧ್ವಜ ಗಮನಿಸಿದ್ದ ಗಸ್ತಿನಲ್ಲಿದ್ದ ಸಿಬ್ಬಂದಿ, ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಹೋಗಿ ವಿಚಾರಿಸಿದ್ದರು. ಯುವಕರಿಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ತಪ್ಪೊಪ್ಪಿಕೊಂಡರು’ ಎಂದರು.

ಗರುಡಾ ಮಾಲ್‌ನಲ್ಲಿ‘ಅವೆಂಜರ್ಸ್‌ ಎಂಡ್ ಗೇಮ್’ ಸಿನಿಮಾ ನೋಡಲು ಹೋಗಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದ ಆರೋಪದಡಿ ಖಾಸಗಿ ಕಂಪನಿ ಉದ್ಯೋಗಿ ಜಿತಿನ್ ಎಂಬಾತನನ್ನು ಕೆಲ ದಿನಗಳ ಹಿಂದಷ್ಟೇ ಅಶೋಕನಗರ ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.