ADVERTISEMENT

ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಫುಡ್‌ಡೆಲಿವರಿ ಬಾಯ್ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 20:25 IST
Last Updated 4 ಫೆಬ್ರುವರಿ 2025, 20:25 IST
ಹೆಸರಘಟ್ಟ ಮುಖ್ಯ ರಸ್ತೆಯ ಎಜಿಬಿ (ಆತ್ಮೀಯ ಗೆಳೆಯರ ಬಳಗ)ಬಡಾವಣೆಯಲ್ಲಿ ನಡೆದ ಕನ್ನಡಿಗನ ಮೇಲೆ ಹಲ್ಲೇ ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋಟೆಲ್ ಮುಂದೆ ಪ್ರತಿಭಟನೆ ನಡೆಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಎಜಿಬಿ (ಆತ್ಮೀಯ ಗೆಳೆಯರ ಬಳಗ)ಬಡಾವಣೆಯಲ್ಲಿ ನಡೆದ ಕನ್ನಡಿಗನ ಮೇಲೆ ಹಲ್ಲೇ ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋಟೆಲ್ ಮುಂದೆ ಪ್ರತಿಭಟನೆ ನಡೆಸಿದರು.   

ಪೀಣ್ಯ ದಾಸರಹಳ್ಳಿ: ಕನ್ನಡದಲ್ಲಿ ಮಾತಾಡಿ ಎಂದು‌ ಹೇಳಿದ ಫುಡ್‌ಡೆಲಿವರಿ ಕೆಲಸಗಾರನ ಮೇಲೆ ಹಲ್ಲೆ ಮಾಡಿದ ಹೋಟೆಲ್‌ನವರ ವಿರುದ್ಧ ಕನ್ನಡ ಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಚಿಕ್ಕಸಂದ್ರದ‌ ನಿವಾಸಿ ನವೀನ್ ಮೇಲೆ ಆತ್ಮೀಯ ಗೆಳೆಯರ ಬಳಗ ಬಡಾವಣೆಯಲ್ಲಿರುವ ಗಬ್ರು ಬಿಸ್ಟೊ ಆ್ಯಂಡ್ ಕೆಫೆ ಹೋಟೆಲ್‌‌ನವರು ಹಲ್ಲೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು‌ ಗಮನಿಸಿದ ಸ್ಥಳೀಯ ಕನ್ನಡ ಪರ ಸಂಘಟನೆಗಳು,ಈ ಘಟನೆ ಖಂಡಿಸಿ, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿ, ಹೋಟೆಲ್‌‌ ಎದುರು ಪ್ರತಿಭಟನೆ ನಡೆಸಿದರು.

ಘಟನೆ‌ ವಿವರ : ಸ್ಬಿಗ್ಗಿ ಫುಡ್ ಡೆಲಿವರಿ ಕೆಲಸ ಮಾಡುವ ನವೀನ್ ಭಾನುವಾರ ರಾತ್ರಿ ಆಹಾರ ತರಲು ಗಬ್ರು ಹೋಟೆಲ್‌ಗೆ ಹೋಗಿದ್ದರು. ಹೋಟೆಲ್‌ನವರು ಆಹಾರ ಕೊಡುವುದು ತಡವಾಗಿದ್ದು, ಅದನ್ನು ನವೀನ್ ಕನ್ನಡದಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಹೋಟೆಲ್‌ ಸಿಬ್ಬಂದಿ ಹಿಂದಿಯಲ್ಲಿ ಉತ್ತರಿಸಿದ್ದಾರೆ. ಆಗ ನವೀನ್, ಕನ್ನಡದಲ್ಲೇ ಮಾತನಾಡುವಂತೆ ಸಿಬ್ಬಂದಿಗೆ ಹೇಳಿದ್ದಾರೆ.‌ ಈ ವೇಳೆ ಹೋಟೆಲ್ ಸಿಬ್ಬಂದಿ ನವೀನ್ ಮೇಲೆ ಹಲ್ಲೆ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.